ಬೆಂಗಳೂರು: ರಾಜ್ಯದ 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ ಹಾಗೂ 3 ಪಟ್ಟಣ ಪಂಚಾಯಿತಿಗಳಿಗೆ ನಡೆದ ಮತದಾನದ ಫಲಿತಾಂಶ ಇಂದು ಹೊರಬಿದಿದ್ದು ಮಂಗಳೂರಿನಲ್ಲಿ ಕಮಲ ಅರಳಿದರೆ, ಕನಕಪುರದಲ್ಲಿ ಕಾಂಗ್ರೆಸ್ ಜಯಭೇರಿಯಾಗಿದೆ.
ಕೋಲಾರ ನಗರಸಭೆ: 35 ವಾರ್ಡ್ ಗಳಲ್ಲಿ 12 ಕಾಂಗ್ರೆಸ್, 8 ವಾರ್ಡ್ ಗಳಲ್ಲಿ ಜೆಡಿಎಸ್, 12 ವಾರ್ಡ್ ಗಳಲ್ಲಿ ಪಕ್ಷೇತರರು ಹಾಗೂ 3 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ನಿಚ್ಚಳ ಬಹುಮತ ಸಿಕ್ಕಿಲ್ಲ.
ಕನಕಪುರ ನಗಸಭೆ: 32 ವಾರ್ಡ್ ಗಳಲ್ಲಿ 19 ಕಾಂಗ್ರೆಸ್, 4 ಜೆಡಿಎಸ್ ಹಾಗೂ ಒಂದು ವಾರ್ಡ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 8 ವಾರ್ಡುಗಳ ಮತ ಎಣಿಕೆ ಪ್ರಗತಿಯಲ್ಲಿದೆ.
ಕಂಪ್ಲಿ ಪುರಸಭೆ: 23ಸ್ಥಾನಗಳಲ್ಲಿ 13 ಬಿಜೆಪಿ ಹಾಗೂ 10 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿವೆ.
ಕೂಡ್ಲಿಗಿ ಪಟ್ಟಣ ಪಂಚಾಯಿತಿ: ಒಟ್ಟು 20 ಸ್ಥಾನಗಳಲ್ಲಿ 7 ಬಿಜೆಪಿ, 6 ಕಾಂಗ್ರೆಸ್, ಜೆಡಿಎಸ್ 4 ಹಾಗೂ ಮೂರು ಸ್ಥಾನಗಳಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ.
ಮಾಗಡಿ ಪುರಸಭೆ: ಒಟ್ಟು 23 ಸ್ಥಾನಗಳಲ್ಲಿ 12ರಲ್ಲಿ ಜೆಡಿಎಸ್, 10ರಲ್ಲಿ ಕಾಂಗ್ರೆಸ್ ಹಾಗೂ 1 ವಾರ್ಡಿನಲ್ಲಿ ಬಿಜೆಪಿ ಗೆಲುವು ಪಡೆದುಕೊಂಡಿದೆ. ಈ ಮೂಲಕ ಜೆಡಿಎಸ್ ಪಕ್ಷವು ಸರಳ ಬಹುಮತವನ್ನು ಪಡೆದುಕೊಂಡಿದೆ.
ಗೌರಿಬಿದನೂರು ನಗರಸಭೆ: 31 ವಾರ್ಡುಗಳಲ್ಲಿ 15 ಜೆಡಿಎಸ್, 7 ಕಾಂಗ್ರೆಸ್, ಬಿಜೆಪಿ-3 ಹಾಗೂ 6 ಪಕ್ಷೇತರ ಅಭ್ಯರ್ಥಿ ವಿಜೇತರಾಗಿದ್ದಾರೆ.
ಚಿಂತಾಮಣಿ ನಗರಸಭೆ: ಜೆಡಿಎಸ್- ಪ್ರಜಾ ಪಾರ್ಟಿ ಪಕ್ಷಗಳಿಗೆ 14 ಸ್ಥಾನ, ಕಾಂಗ್ರೆಸ್ ಗೆ 1 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದ್ದಾರೆ.
ಜೋಗ-ಕಾರ್ಗಲ್ ಪಟ್ಟಣ ಪಂಚಾಯತ್: ಬಿಜೆಪಿ 9 ಸ್ಥಾನ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಜಯಗಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ: 60 ವಾರ್ಡುಗಳಲ್ಲಿ 44 ಬಿಜೆಪಿ, ಕಾಂಗ್ರೆಸ್ 14 ಸ್ಥಾನಗಳಲ್ಲಿ ಹಾಗೂ ಎಸ್ ಡಿಪಿಐ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.