ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ 15 ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಗುರುವಾರ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಡಿಸೆಂಬರ್ 5ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ 16 ಮಂದಿ ಅನರ್ಹ ಶಾಸಕರು ಬಿಜೆಪಿ ಸೇರಿದ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗಿದೆ.
1)ಅಥಣಿ: ಮಹೇಶ್ ಕುಮಟಳ್ಳಿ
2)ಯಲ್ಲಾಪುರ: ಶಿವರಾಮ ಹೆಬ್ಬಾರ್
3)ಕಾಗವಾಡ: ಶ್ರೀಮಂತ ಗೌಡ ಪಾಟೀಲ್
4)ಗೋಕಾಕ್: ರಮೇಶ್ ಜಾರಕಿಹೊಳಿ
5)ಹಿರೇಕೆರೂರು: ಬಿಸಿ ಪಾಟೀಲ್
6)ವಿಜಯನಗರ: ಆನಂದ್ ಸಿಂಗ್
7)ಚಿಕ್ಕಬಳ್ಳಾಪುರ: ಡಾ. ಸುಧಾಕರ್
8) ಕೆಆರ್ ಪುರಂ: ಭೈರತಿ ಬವಸರಾಜ್
9)ಯಶವಂತಪುರ: ಎಸ್ ಟಿ ಸೋಮಶೇಖರ್
10) ಮಹಾಲಕ್ಷ್ಮೀ ಲೇಔಟ್: ಕೆ.ಗೋಪಾಲಯ್ಯ
11)ಕೆಆರ್ ಪೇಟೆ: ಕೆಸಿ ನಾರಾಯಣ ಗೌಡ
12)ಹೊಸಕೋಟೆ: ಎಂಟಿಬಿ ನಾಗರಾಜ್
13)ಹುಣಸೂರು: ಎಚ್.ವಿಶ್ವನಾಥ್.
14) ಶಿವಾಜಿನಗರ ಎಂ ಶರವಣ