ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ,ರಾಜ್ಯ ಪ್ರಶಸ್ತಿ ಪುರಸ್ಕೃತ, ಖ್ಯಾತ ಲೇಖಕ ಡಂ.ಶಾ.ಲೋಕಾಪುರ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಲೋಕಾಪುರ ಅವರು ಮರಾಠಿ ಸಾಹಿತ್ಯದ ಮೇಲೆ ಕನ್ನಡದ ಪ್ರಭಾವ ಕುರಿತು ಅಳವಾದ ಸಂಶೋಧನೆ ಮಾಡಿದ್ದರು.
ಅನಂತಮೂರ್ತಿಯವರ ಸಂಸ್ಕಾರ, ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಗಳನ್ನು ಮರಾಠಿಗೆ ಅನುವಾದ ಮಾಡಿದ್ದರು. ಅವರ ಸಾವಿತ್ರಿ, ತಾಯಿ ಸಾಹೇಬದಂತ ಶ್ರೇಷ್ಠ ಕಾದಂಬರಿಗಳು ಜನಪ್ರಿಯವಾಗಿದ್ದವು.