ಬೆಂಗಳೂರು: ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಕೆಎಸ್ ಇಇಬಿ) ಶುಕ್ರವಾರ ಬಿಡುಗಡೆಗೊಳಿಸಿದೆ.
ಅಂತಿಮ ವೇಳಾಪಟ್ಟಿಯ ಪ್ರಕಾರ 2020ರ ಮಾರ್ಚ್ 27ರಂದು ಪರೀಕ್ಷೆಯು ಆರಂಭವಾಗಲಿದೆ ಮತ್ತು ಎಪ್ರಿಲ್ 9ರಂದು ಕೊನೆಗೊಳ್ಳಲಿದೆ.
ಅಕ್ಟೋಬರ್ 20 ಕರಡು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಕರಡು ವೇಳಾಪಟ್ಟಿಯಂತೆ ಅಂತಿಮ ಪರೀಕ್ಷೆಗಳು ಮಾರ್ಚ್ 20ರಿಂದ ಎಪ್ರಿಲ್ 3ರ ತನಕ ನಡೆಯಲಿತ್ತು. ಸಾರ್ವಜನಿಕರ ಸಲಹೆ ಪಡೆದುಕೊಂಡ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮುಂದಿನ ವರ್ಷ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಲಾಗಿದೆ.