(ಸಾಂದರ್ಭಿಕ ಚಿತ್ರ)
ಬೆಂಗಳೂರು: ಈಗ ಭಾರೀ ಸುದ್ದಿ ಮಾಡುತ್ತಿರುವಂತಹ ಹನಿಟ್ರ್ಯಾಪ್ ಪ್ರಕರಣದಲ್ಲಿ ಕರಾವಳಿಯ ಇಬ್ಬರು ಶಾಸಕರು ಸಿಕ್ಕಿಬೀಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ನಿವಾಸಿ ಮತ್ತು ಆತನ ಗ್ಯಾಂಗ್ ಕಿರುತೆರೆಯ ನಟಿಯರನ್ನು ಇಟ್ಟುಕೊಂಡು ನಡೆಸುತ್ತಿದ್ದ ಹನಿಟ್ರ್ಯಾಪ್ ಗೆ ಕರಾವಳಿಯ ಇಬ್ಬರು ಶಾಸಕರು ಸಿಲುಕಿದ್ದರು. ಆದರೆ ಅದೃಷ್ಟದಿಂದ ಅವರು ರಕ್ಷಿಸಲ್ಪಟ್ಟರು ಎಂದು ತನಿಖೆ ವೇಳೆ ಬಹಿರಂಗವಾಗಿದೆ.
ಮೊದಲ ಶಾಸಕ ರಕ್ಷಣೆಯಾಗಲು ಪ್ರಮುಖ ಕಾರಣವೆಂದರೆ ಆ ಕೋಣೆಯಲ್ಲಿ ಕರೆಂಟ್ ಕೈಕೊಟ್ಟಿತ್ತು ಮತ್ತು ಕ್ಯಾಮರಾ ಕೆಲಸ ಮಾಡುತ್ತಿರಲಿಲ್ಲ. ಎರಡನೇ ಶಾಸಕನ ಪ್ರಕರಣದಲ್ಲಿ ಕಿರುತೆರೆ ನಟಿಯ ವ್ಯಾನಿಟಿ ಬ್ಯಾಗ್ ಕೆಳಗೆ ಬಿದ್ದ ಕಾರಣದಿಂದಾಗಿ ಕ್ಯಾಮರಾ ಸ್ವಿಚ್ ಆಫ್ ಆಗಿತ್ತು.
ಕ್ಯಾಮರಾದಲ್ಲಿ ಯಾವುದೇ ದೃಶ್ಯಗಳು ಸೆರೆಯಾಗದೆ ಉಳಿದಿದ್ದ ಕಾರಣದಿಂದಾಗಿ ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಹಿಂದೇಟು ಹಾಕಿತು ಎಂದು ತನಿಖೆಯಿಂದ ತಿಳಿದುಬಂದಿದೆ.
ಬಿಜೆಪಿಯೇತರ ಕೆಲವು ಮಂದಿ ಈ ಗ್ಯಾಂಗ್ ಗೆ ಹಣ ನೀಡಿ ವಿಡಿಯೋ ಪಡೆದುಕೊಂಡಿದ್ದು, ಇದರ ಬಗ್ಗೆಯೂ ತನಿಖೆ ಆಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.