ಬೆಂಗಳೂರು: ಬೃಹತ್ ಬೆಂಗಳೂರು ಮಾಹಾನಗರ ಪಾಲಿಕೆ(ಬಿಬಿಎಂಪಿ) ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿಯಾಗಿದ್ದು, ಯಾವ ಸದಸ್ಯರು ನಾಮಪತ್ರ ಸಲ್ಲಿಸಿಲ್ಲ.
ಇಂದು ಚುನಾವಣೆ ನಿಗದಿಯಾಗಿದ್ದು, ಬೆಳಗ್ಗೆ 8ರಿಂದ 9.30ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಯಾರೊಬ್ಬರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಪ್ರಾದೇಶಿಕ ಚುನಾವಣಾ ಆಯುಕ್ತರು ಚುನಾವಣೆ ಮುಂದೂಡಿದರು.
ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವ ಕಾರಣ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಬೇಕು ಎಂದು ಮೂರು ಪಕ್ಷಗಳು ಕೇಳಿಕೊಂಡಿದ್ದವು. ಆದರೆ ಚುನಾವಣಾ ಆಯೋಗವು ಇದನ್ನು ನಿರಾಕರಿಸಿದ್ದ ಕಾರಣ ಯಾವ ಸದಸ್ಯರೂ ಹಾಜರಾಗದೆ ಚುನಾವಣೆ ಬಹಿಷ್ಕರಿಸಿದರು.