ಬೆಂಗಳೂರು: ಮಂಗಳವಾರ ತಡರಾತ್ರಿ ವೇಳೆ ಆತ್ಮಹತ್ಯೆಗೆ ಯತ್ನಿಸಿದ ನವ ದಂಪತಿಯನ್ನು ಪೊಲೀಸರು ಪಾರು ಮಾಡಿರುವ ಘಟನೆಯು ನಡೆದಿದೆ.
ಮಂಗಳವಾರ ರಾತ್ರಿ ಬಾಲಾಜಿ ಮತ್ತು ಸೌಮ್ಯ ಎಂಬಿಬ್ಬರು ಗಿರಿನಗರದ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡು ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ, ಪ್ರಾಣ ಕಾಪಾಡಿದರು.
ಗಿರಿನಗರ ಸಬ್ ಇನ್ಸ್ ಪೆಕ್ಟರ್ ವಿನಯ್ ಮತ್ತು ಸಿಬ್ಬಂದಿ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ದಂಪತಿಯ ಆಸ್ಪತ್ರೆಗೆ ದಾಖಲಿಸಿದರು.