ಬೆಂಗಳೂರು: ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ರಾಜ್ಯ ರಾಜಧಾನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಇತಿಹಾಸ ಎಂಬಂತೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ೨೦೦ಗಟಿ ದಾಟಿದೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ದನ್ವೆ ರಾವ್ ಸಾಹೇಬ್ ದಾದಾರಾವ್ ಅವರು, ಈರುಳ್ಳಿ ಬೆಲೆ ಏರಿಕೆ ಬಗ್ಗೆ ಯಾವುದೇ ಅನುಮಾನ ಇಲ್ಲ. ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ. ಸರ್ಕಾರ ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದ್ದು, ಜನವರಿ 20ರ ವೇಳೆಗೆ ಬರಲಿದೆ ಎಂದರು.
ವೆಂದೂರು ಎಪಿಎಂಸಿ ಪ್ರಕಾರ ಪ್ರತಿ ಕೆಜಿಯ ಈರುಳ್ಳಿಯ ರಖಂ ದರ ೧೮೦ ರೂಪಾಯಿ. ಪ್ರತಿ ಕೆಜಿ ಈರುಳ್ಳಿ ಚಿಲ್ಲರೆ ದರ ೨೦೦ ಆಗಿದೆ. ಮಧ್ಯವರ್ತಿಗೆ ಶೇ ೬ ಕಮಿಷನ್ ಹಾಗೂ ಸಾರಿಗೆ ವೆಚ್ಚವೂ ಸೇರಿಕೊಂಡಿದೆ ಎಂಧು ಮಹೇಶ್ ಕುಮಾರ್ ವಿವರಿಸಿದರು.