News Kannada
Tuesday, October 04 2022

ಬೆಂಗಳೂರು ನಗರ

ಬಿಜೆಪಿ 15 ಸ್ಥಾನಗಳನ್ನೂ ಗೆಲ್ಲುತ್ತಾರೆ ಬಿಡಿ: ಸಿಎಂ ಹೇಳಿಕೆಗೆ ಡಿಕೆಶಿ ವ್ಯಂಗ್ಯ - 1 min read

Photo Credit :

ಬಿಜೆಪಿ 15 ಸ್ಥಾನಗಳನ್ನೂ ಗೆಲ್ಲುತ್ತಾರೆ ಬಿಡಿ: ಸಿಎಂ ಹೇಳಿಕೆಗೆ ಡಿಕೆಶಿ ವ್ಯಂಗ್ಯ

ಬೆಂಗಳೂರು: ಬಿಜೆಪಿ ಹದಿಮೂರು ಸ್ಥಾನಗಳಷ್ಟೇ ಗೆಲ್ಲುತ್ತೆ ಎಂದು ಯಾರು ಹೇಳಿದ್ದು. ಅವರು 15 ಸ್ಥಾನಗಳನ್ನೂ ಗೆಲ್ಲುತ್ತಾರೆ ಬಿಡಿ. ಎರಡು ಸ್ಥಾನಗಳಲ್ಲಿ ಅವರು ಯಾಕೆ ಸೋಲುತ್ತಾರೆ. ಪಾಪ ಎರಡು ಕ್ಷೇತ್ರಗಳಲ್ಲಿ ಸೋತು ಯಾಕೆ ಅವರಿಗೆ ಅನ್ಯಾಯ ಮಾಡ್ತಾರೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ 13 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂಬ ಸಿಎಂ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಬಿಜೆಪಿಯವರು ಈಗಾಗಲೇ ಇಬ್ಬರಿಗೆ ಅನ್ಯಾಯ ಮಾಡಿದ್ದಾರೆ. ಈಗ ಎರಡು ಕ್ಷೇತ್ರ ಸೋತು ಮತ್ತೆ ಯಾಕೆ ಅನ್ಯಾಯ ಮಾಡುತ್ತಾರೆ. 15 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿ ಬಿಡಿ ಎಂದರು.

ಕನಕಪುರಕ್ಕೆ ಮೆಡಿಕಲ್ ಕಾಲೇಜು ರದ್ದು ಮಾಡಿರೋ ವಿಚಾರವಾಗಿ ಮಾತನಾಡಿದ ಅವರು ಕನಕಪುರಕ್ಕೆ‌ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ರದ್ದು ಆದೇಶವನ್ನ ವಾಪಸ್ ಪಡೆಯಬೇಕು. ಕಾಲೇಜು ಸ್ಥಾಪನೆಗೆ ಅವಕಾಶ ಮಾಡಿ ಕೊಡಿ ಅಂತಾ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದೇನೆ. ಆದರೆ, ಈ ವಿಚಾರದಲ್ಲಿ ಯಡಿಯೂರಪ್ಪ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದರು.

ನಾವು ರಾಜಕಾರಣದಲ್ಲಿಯೇ ಇರುವವರು. ಹೇಗೆ ಹೋರಾಟ ಮಾಡಬೇಕು ಎಂಬುದು ಗೊತ್ತಿದೆ. ಹೋರಾಟಕ್ಕೆ ಸಾವಿರಾರು ಜನ ಬೇಕಾಗಿಲ್ಲ. ಒಂದಿಬ್ಬರು ಪರಿಷತ್ ಸದಸ್ಯರು ಇದ್ದಾರೆ, ಅಷ್ಟು ಸಾಕು ಎಂದು ಡಿಕೆ ಶಿವಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು

See also  ರಾಜ್ಯ ಶಿಕ್ಷಣ ತಜ್ಞರಿಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು