News Kannada
Tuesday, December 06 2022

ಬೆಂಗಳೂರು ನಗರ

ಪೇಜಾವರ ಶ್ರೀ ವಿಧಿವಶ: ಮೋದಿ, ಅಮಿತ್ ಶಾ ಸಂತಾಪ

Photo Credit :

ಪೇಜಾವರ ಶ್ರೀ ವಿಧಿವಶ: ಮೋದಿ, ಅಮಿತ್ ಶಾ ಸಂತಾಪ

ಬೆಂಗಳೂರು: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.

ಮೋದಿ ಅವರು ನಿಧನದ ಸುದ್ದಿ ತಿಳಿಯುತ್ತಲೇ ಟ್ವೀಟ್ ಮಾಡಿದ್ದಾರೆ. ಪೇಜಾವರ ಶ್ರೀಗಳು ಲಕ್ಷಾಂತರ ಭಕ್ತರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಧಾರ್ಮಿಕ ಮತ್ತು ಸೇವಾ ರಂಗದಲ್ಲಿ ಮೇರು ವ್ಯಕ್ತಿತ್ವವಾಗಿದ್ದ ಅವರು ಮಾನವೀಯ ಸಮಾಜ ನಿರ್ಮಾಣದತ್ತ ಸದಾ ಕ್ರಿಯಾಶೀಲರಾಗಿದ್ದರು. ಗುರುಪೂರ್ಣಿಮೆಯದಂದು ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿರುವುದು ನೆನಪಿನಲ್ಲಿ ಉಳಿಯುವಂಥದ್ದು. ಅವರ ನಿಷ್ಕಾಮ ಜ್ಞಾನವು ಅವಿಸ್ಮರಣೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವೇಶತೀರ್ಥರ ಅಗಲಿಕೆ ನೋವುಂಟು ಮಾಡಿದೆ. ಅವರು ಮಾನವೀಯ ಮೌಲ್ಯ ಮತ್ತು ಜ್ಞಾನದ ಪ್ರತಿರೂಪ. ಜನ ಕಲ್ಯಾಣ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ ಸರಿಸಾಟಿ ಇಲ್ಲದ್ದು. ಅವರ ಚಿಂತನೆಗಳು ಮಾರ್ಗದರ್ಶಕ. ಅವರ ಆಶೀರ್ವಾದ ಪಡೆದದ್ದು ನನ್ನ ಪುಣ್ಯ. ಆಧ್ಯಾತ್ಮ ಜಗತ್ತಿಗೆ ಅವರ ಅಗಲಿಕೆ ಅಪಾರ ನಷ್ಟು ಉಂಟು ಮಾಡಿದೆ ಎಂದು ಟ್ವೀಟ್ ಮಾಡಿರುವರು.

See also  ಮೆಟ್ರೋದಲ್ಲಿ ಯುವತಿ ಜತೆ ಅಸಭ್ಯ ವರ್ತನೆ: ಮೂವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು