News Kannada
Thursday, December 08 2022

ಬೆಂಗಳೂರು ನಗರ

ಕೆಪಿಸಿಸಿ ಸಭೆಯಿಂದ ಅರ್ಧದಲ್ಲೇ ಎದ್ದು ಹೋದ ಡಿ.ಕೆ.ಶಿವಕುಮಾರ್!

Photo Credit :

ಕೆಪಿಸಿಸಿ ಸಭೆಯಿಂದ ಅರ್ಧದಲ್ಲೇ ಎದ್ದು ಹೋದ ಡಿ.ಕೆ.ಶಿವಕುಮಾರ್!

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ನಿರ್ದೇಶನದಂತೆ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಮನೆಯಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಸಭೆಯು ಡಿ.ಕೆ.ಶಿವಕುಮಾರ್ ಅರ್ಧದಲ್ಲೇ ಸಭೆಯಿಂದ ಹೊರನಡೆಯುವ ಮೂಲಕವಾಗಿ ಅಂತ್ಯಗೊಂಡಿದೆ.

ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ವೀರಪ್ಪ ಮೊಯ್ಲಿ ಮಧ್ಯೆ ಮಾತಿನ ಚಕಮಕಿಯು ನಡೆದಿದೆ. ಕೆಎಚ್ ಮುನಿಯಪ್ಪ ಮತ್ತು ಬಿಕೆ ಹರಿಪ್ರಸಾದ್ ಅವರು ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಮೂಲಗಳ ಪ್ರಕಾರ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರೆಲ್ಲರೂ ಭಾಗಿಯಾಗಿದ್ದರು. ಈ ಸಭೆಯಲ್ಲಿ ತನ್ನನ್ನು ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ಆಯ್ಕೆ ಮಾಡುವ ಪ್ರಸ್ತಾವ ಮಂಜೂರು ಮಾಡಬೇಕೆಂದು ಡಿಕೆಶಿ ಪಟ್ಟು ಹಿಡಿದರು. ಆದರೆ ಕೆಲವು ಹಿರಿಯ ನಾಯಕರಾದ ಎಂಬಿ ಪಾಟೀಲ, ಸತೀಶ್ ಜಾರಕಿಹೊಳಿ ಮೊದಲಾದವರು ಇದನ್ನು ವಿರೋಧಿಸಿದರು. ಕೇವಲ ಪರಮೇಶ್ವರ್ ಮಾತ್ರ ಡಿಕೆಶಿಗೆ ಬೆಂಬಲ ನೀಡಿದರು. ಇದರಿಂದ ಕೋಪಗೊಂಡ ಡಿಕೆಶಿ, ತನಗೆ ದೇವಸ್ಥಾನಗಳಿಗೆ ಭೇಟಿ ನೀಡಲಿಕ್ಕಿದೆ ಎಂದು ಹೇಳಿ ಅಲ್ಲಿಂದ ತೆರೆಳಿದರು.

ಮೂಲಗಳ ಪ್ರಕಾರ ತಾನು ಕೋರ್ಟ್ ನಿಂದ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಾಂಗ್ರೆಸ್ ನಾಯಕರಿಂದಾಗಿ ಎಂದು ಡಿಕೆಶಿ ಕಿಡಿಕಾರಿದರು ಎಂದು ತಿಳಿದುಬಂದಿದೆ.

ಇದೇ ವೇಳೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಿದ್ದರಾಯಮಯ್ಯ ಕಾರಣವೆಂದು ನಾಯಕರಾದ ಮೊಯ್ಲಿ, ಮುನಿಯಪ್ಪ, ಹರಿಪ್ರಸಾದ್ ದೂಷಿಸಿದರು ಎಂದು ಮೂಲಗಳು ತಿಳಿಸಿವೆ.

See also  ನಲಪಾಡ್​ನಿಂದ ಬೆದರಿಕೆ – ಪೊಲೀಸ್ ರಕ್ಷಣೆ ಕೋರಿದ ಯುವ ಕಾಂಗ್ರೆಸ್ ನಾಯಕಿ ಭವ್ಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು