News Kannada
Sunday, September 25 2022

ಬೆಂಗಳೂರು ನಗರ

ಶಾಸಕರ ಭವನಕ್ಕೆ ಲಗ್ಗೆ ಇಟ್ಟು ಕೊವಿಡ್-19 - 1 min read

Photo Credit :

ಶಾಸಕರ ಭವನಕ್ಕೆ ಲಗ್ಗೆ ಇಟ್ಟು ಕೊವಿಡ್-19

ಬೆಂಗಳೂರು: ಕೊವಿಡ್-19 ಸೋಂಕು ಈಗ ರಾಜ್ಯದ ಆಡಳಿತ ಕಚೇರಿಗಳ ಮೇಲೆ ದಾಳಿ ಮಾಡಲು ಆರಂಭಿಸಿದ್ದು, ವಿಧಾನ ಸೌಧ, ವಿಕಾಸ ಸೌಧ ಬಳಿಕ ಈಗ ಶಾಸಕರ ಭವನಕ್ಕೆ ಲಗ್ಗೆ ಇಟ್ಟಿದೆ.

ಶಾಸಕರ ಭವನದ ಕಾರು ತೊಳೆಯುವ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಬಿಬಿಎಂಪಿ ಈಗ ಶಾಸಕರ ಭವನವನ್ನು ಸೀಲ್ ಡೌನ್ ಮಾಡಿದೆ ಮತ್ತು ಇಲ್ಲಿ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಿದೆ.

ಕಳೆದ 14 ದಿನಗಳಲ್ಲಿ ಈ ವ್ಯಕ್ತಿಯು ಸುಮಾರು ಹತ್ತು ಕಾರುಗಳನ್ನು ತೊಳೆದಿರುವರು ಮತ್ತು ಇದರಿಂದ ಕಾರಿನಲ್ಲಿ ಪ್ರಯಾಣಿಸಿದವರಿಗೆ ಕೂಡ ಸೋಂಕು ಹರಡಿರಬಹುದು ಎನ್ನುವ ಶಂಕೆಯು ವ್ಯಕ್ತವಾಗಿದೆ. ಇವರ ಸಂಪರ್ಕಕ್ಕೆ ಬಂದಿದ್ದವರಿಗೆ ಕ್ವಾರಂಟೈನ್ ಗೆ ಸೂಚಿಸಲಾಗಿದೆ.

ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಯು ಪ್ರತೀ 15 ದಿನಕ್ಕೊಮ್ಮೆ ಕೊವಿಡ್-19 ಪರೀಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

See also  ಬಿಹಾರ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು