News Kannada
Tuesday, November 29 2022

ಬೆಂಗಳೂರು ನಗರ

ಶಾಸಕರ ಮನೆ ಮೇಲೆ ದಾಳಿಗೆ ಭೋವಿ ಜನಾಂಗ ಪರಿಷತ್ ಖಂಡನೆ - 1 min read

Photo Credit :

ಶಾಸಕರ ಮನೆ ಮೇಲೆ ದಾಳಿಗೆ ಭೋವಿ ಜನಾಂಗ ಪರಿಷತ್ ಖಂಡನೆ

ಬೆಂಗಳೂರು: ಪುಲಿಕೇಶಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮತ್ತು ಕಛೇರಿ ಮೇಲೆ ದುಷ್ಕರ್ಮಿಗಳು ದಾಂಧಲೆ ನಡೆಸಿ ಕೋಮುಗಲಭೆ ಸೃಷ್ಟಿಸಿರುವವರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಜರುಗಿಸಬೇಕೆಂದು ಭಾರತೀಯ  ಭೋವಿ ಜನಾಂಗ ಪರಿಷತ್ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೋವಿ ಜನಾಂಗದ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ಹೆಚ್. ರವಿಮಾಕಳಿ, ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ರೀತಿ ಶಿಕ್ಷ ನೀಡಬೇಕು ಹಾಗೂ ಶಾಸಕರು ಮತ್ತು ಕುಟುಂಬದವರಿಗೆ ರಕ್ಷಣೆ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಿದರು. ನಮ್ಮ ಜನಾಂಗದ ಶಾಸಕರಾದಂತಹ ಅಖಂಡ ಶ್ರೀನಿವಾಸಮೂರ್ತಿಯವರ ಮೇಲೆ ಈ ರೀತಿ ಕಿಡಿಗೇಡಿಗಳು ನಡೆಸಿರುವ ಕೃತ್ಯವನ್ನು ಸಮಾಜವು ತೀವ್ರವಾಗಿ ಖಂಡಿಸುತ್ತದೆ.  ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. ದುಷ್ಕರ್ಮಿಗಳು ಮನೆಗೆ ನುಗ್ಗಿ ಒಡವೆ ವಸ್ತ್ರಗಳು ಹಾಗೂ ಮನೆಯಲ್ಲಿರುವಂತಹ ಪೀಠೋಪಕರಣಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದರೋಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವರಾದ ಶಿವರಾಜ್ ಎಸ್. ತಂಗಡಿಗಿ ಮಾತನಾಡಿ ಘಟನೆಯಿಂದ ಭಯಬೀತರಾಗಿರುವ ಕುಟುಂಬದ ಸದಸ್ಯರು ಪ್ರಾಣ ಉಳಿಸಿಕೊಳ್ಳಲು ಬೇರೆ ಕಡೆ ಆಶ್ರಯ ಪಡೆದಿದ್ದಾರೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಜೀವ ಬೆದರಿಕೆ ಎದುರಿಸುತ್ತಿರುವ ಅವರ ಕುಟುಂಬ ಸದಸ್ಯರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿದರು. ಮುಖ್ಯಮಂತ್ರಿ ಯಡಿಯೂರಪ್ಪ, ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಶಾಸಕರು ಮತ್ತು ಅವರ ಕುಟುಂಬದವರಿಗೆ ಬೆದರಿಕೆ ಕರೆಗಳು ಬರುತ್ತಿವೆ.  ಈ ಬಗ್ಗೆ ತನಿಖೆ ನಡೆಸಬೇಕು ಮತ್ತು  ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಸಮುದಾಯ ಬೀದಿಗಿಳಿಯಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಘಟನೆಯಲ್ಲಿ ಶಾಸಕರ ಮನೆ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಹೋಗಿದೆ. ರಸ್ತೆಯಲ್ಲಿ ನಾಲ್ಕು ಕಾರುಗಳು ಸಂಪೂರ್ಣ ನಾಶವಾಗಿದ್ದು ಎರಡು ಚಕ್ರದ ಬಹಳಷ್ಟು ವಾಹನಗಳು ಭಸ್ಮವಾಗಿವೆ. ಭೋವಿ ಸಮಾಜವು ಕರ್ನಾಟಕದಲ್ಲಿ ಸುಮಾರು 40 ಲಕ್ಷ ಜನ ಸಂಖ್ಯೆ ಇದ್ದು ಕಷ್ಟಕರವಾದಂತಹ ಬಂಡೆಕೆಲಸ, ಮಣ್ಣು ಕೆಲಸ, ಮನೆ ಕಟ್ಟುವುದು, ಆಣೆಕಟ್ಟು ಕೆಲಸ ಇತರೇ ಮನುಕುಲಕ್ಕೆ ಬೇಕಾದಂತಹ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎಂದರು.

See also  ಕರ್ನಾಟಕ ಶಾಂತಿಯ ತೋಟ, ಯುವಕರೇ ಮನೆಹಾಳು ಕೆಲಸಗಳಿಗೆ ಕಿವಿಡಗೊಡಬೇಡಿ; ಹೆಚ್‌ಡಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು