ಬೆಂಗಳೂರು: ಅಖಿಲ ಭಾರತ ಮೆರಿಟ್ ಕೋಟಾದಡಿಯಲ್ಲಿ ಎಂಬಿಬಿಎಸ್ ಸೀಟುಗಳನ್ನು ಬ್ಲಾಕ್ ಮಾಡಲು ಪ್ರಯತ್ನಿಸುತ್ತಿದ್ದವರನ್ನು ಮಲ್ಲೇಶ್ವರಂನಲ್ಲಿ ಬಂಧಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಯ ಕಚೇರಿಗೆ ಮೂರು ಮಂದಿ ಬಂದು ವೈದ್ಯಕೀಯ ಸೀಟುಗಳ ಬಗ್ಗೆ ವಿಚಾರಣೆ ಮಾಡಲು ಆರಂಭಿಸಿದ ವೇಳೆ ಇದು ಬೆಳಕಿಗೆ ಬಂದಿದೆ.
ಈ ಸೀಟುಗಳು ಮೂವರು ಯುವಕರಿಗೆ ಮೀಸಲಾಗಿದೆ. ಇದರ ಬದಲಿಗೆ ಕೆಇಎಗೆ ಮೂರು ಮಂದಿ ಹುಡುಗಿಯರು ಬಂದಿದ್ದರು. ಇದರ ಬಗ್ಗೆ ಸಂಶಯಗೊಂಡರು. ಇದರ ಬಗ್ಗೆ ಮಲ್ಲೇಶ್ವರಂ ಪೊಲೀಸರಿಗೆ ದೂರು ನೀಡಿದ ಬಳಿಕ ಅವರು ಮೂವರನ್ನು ಬಂಧಿಸಿದರು.
ಈ ಬಗ್ಗೆ ಕೆಇಎ ಅಧಿಕಾರಿಗಳು ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನೀಟ್ ನಲ್ಲಿ ಈಗಲೂ ಹಲವಾರು ಸಮಸ್ಯೆಗಳಿದ್ದು, ಕೆಲವು ಏಜೆಂಟರು ಮಾರ್ಕ್ಸ್ ಕಾರ್ಡ್ ಹಾಗೂ ದಾಖಲೆಗಳನ್ನು ಹಿಡಿದುಕೊಂಡು ಸೀಟು ಬ್ಲಾಕ್ ಮಾಡುತ್ತಿರುವರು ಎಂದು ತಿಳಿದುಬಂದಿದೆ.