ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಂದು 86.20 ರೂ ಹಾಗೂ 78.03 ರೂ.ಗಳಿಗೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 29 ಪೈಸೆ ಏರಿದ್ದು, ಡೀಸೆಲ್ ಬೆಲೆ ಲೀ.ಗೆ 30 ಪೈಸೆ ಹೆಚ್ಚಿದೆ.
ನವೆಂಬರ್ 20ರ ಬಳಿಕ ಇದು 14ನೇ ಬಾರಿಗೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗುತ್ತಿದ್ದು, ಕೇವಲ 17 ದಿನಗಳ ಕಾಲದಲ್ಲಿ ಪೆಟ್ರೋಲ್ ಬೆಲೆ 2.35 ರೂ. ಏರಿಕೆಯಾಗಿದ್ದರೆ, ಡೀಸೆಲ್ 3.15 ರೂ. ಏರಿಕೆ ಕಂಡಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 83.71 ರೂ ತಲುಪಿದ್ದು ಇಂದು 30 ಪೈಸೆ ಏರಿಕೆ ಕಂಡಿದೆ ಹಾಗೂ ಒಂದು ಲೀಟರ್ ಡೀಸೆಲ್ ಬೆಲೆಯಲ್ಲಿ 29 ಪೈಸ ಗಳಷ್ಟು ಹೆಚ್ಚಿದ್ದು 73.87 ರೂಗಳಷ್ಟು ಏರಿಕೆ ಕಂಡಿದೆ. ಇನ್ನು ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ಗೆ 90 ರೂ. ದಾಟಿದ್ದರೆ, ಡೀಸೆಲ್ಗೆ 80 ರೂ.ಗಳಿಗೆ ಹೆಚ್ಚಿದೆ.