ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ಸಾಲುಮರದ ತಿಮ್ಮಕ್ಕ ರವರನ್ನು ದಾಖಲು ಮಾಡಲಾಗಿದೆ.
ಮೂಲ ಮನೆಯಾದ ಬೇಲೂರಿನಲ್ಲಿ ಇದ್ದ ತಿಮ್ಮಕ್ಕ ಅವರಿಗೆ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದಿತು. ಹಾಗೂ ಭಾನುವಾರ ಸಂಜೆ ಸಮಯದಲ್ಲಿ ಕುಸಿದು ಬಿದ್ದಿದ್ದರು ಎಂದು ಹೇಳಲಾಗುತ್ತದೆ. ತಕ್ಷಣವೇ ಹಾಸನದಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ನಂತರದ ಚಿಕಿತ್ಸೆಗಾಗಿ ಇದೀಗ ಬೆಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಸಾಲುಮರದ ತಿಮ್ಮಕ್ಕ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲಾಯಿತು ಹಾಗೂ ಅವರ ಸದ್ಯದ ಪ್ರೀತಿಯಲ್ಲಿ ಆರೋಗ್ಯವಾಗಿದ್ದಾರೆ ಎಂದು ದತ್ತುಪುತ್ರ ಉಮೇಶ್ ಸ್ಪಷ್ಟಪಡಿಸಿದ್ದಾರೆ.