ಬೆಂಗಳೂರು: ವಿಧಾನ ಪರಿಷತ್ ನಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಹೊಸ ಭೂ ಸುಧಾರಣಾ ಮಸೂದೆಯು ಅಂಗೀಕಾರಗೊಂಡಿದೆ.
ಮಸೂದೆ ಬಗ್ಗೆ ಚರ್ಚೆ ಬಳಿಕ ನಡೆದ ಮತದಾನದಲ್ಲಿ ಮಸೂದೆ ತಿದ್ದುಪಡಿ ಪರವಾಗಿ 37-21 ಮತಗಳು ಬಿದ್ದವು. ಇದರಿಂದ ಮಸೂದೆಯು ಅಂಗೀಕಾರವಾಗಿದೆ.
ಜೆಡಿಎಸ್ ಸದಸ್ಯರೆಲ್ಲರೂ ಮಸೂದೆ ಪರವಾಗಿ ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿ ಸರ್ಕಾರ ಮಸೂದೆ ತಿದ್ದುಪಡೆಯನ್ನು ಎರಡೂ ಸದನದಲ್ಲಿ ಅಂಗೀಕಾರವಾಗುವಂತೆ ನೋಡಿಕೊಂಡಿತು.