ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ನಾಲ್ಕು ನಿಗಮಗಳ ಸಾರಿಗೆ ನೌಕರರು ಇಂದು ಬಸ್ಗಳ ಸಂಚಾರ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದಾರೆ.
ಇದರಿಂದ ಪ್ರಮುಖವಾಗಿ ನಗರದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ.
ಮೆಜೆಸ್ಟಿಕ್ನ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ನಿಲ್ದಾಣಗಳಲ್ಲಿ ಬಸ್ಗಳು ನಿಂತಲ್ಲೇ ನಿಂತಿದ್ದು, ಡಿಪೋಗಳಲ್ಲಿದ್ದ ಬಿಎಂಟಿಸಿ ಬಸ್ಗಳನ್ನು ನೌಕರರು ಹೊರಕ್ಕೆ ತೆಗೆಯದೆ ಮುಷ್ಕರ ನಡೆಸುತ್ತಿದ್ದಾರೆ. ರಾತ್ರಿ ಬಸ್ಗಳನ್ನು ಬೇರೆ ಸ್ಥಳದಲ್ಲಿ ನಿಲ್ಲಿಸಲಾಗಿತ್ತು ಅವುಗಳನ್ನ ಅಲ್ಲಲ್ಲೇ ನಿಲ್ಲಿಸಲಾಗಿದೆ. ಬಸ್ ಸಂಚಾರ ಇಲ್ಲವಾದ್ದರಿಂದ ದಿನನಿತ್ಯದ ಕೆಲಸಕ್ಕೆ ಹೋಗಬೇದ ಕಾರ್ಮಿಕರು ಪರದಾಡುವಂತಾಗಿದೆ.
ವಿಧಾನಸೌಧ ಚಲೋ ನಡೆಸಿದ ನೌಕರರ ಸಂಘದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದೆ ನೌಕರರ ಸಿಟ್ಟಿಗೆ ಕಾರಣವಾಗಿವೆ. ರಾತ್ರಿ ಬೇರೆ ಬೇರೆ ನಿಲ್ದಾಣಗಳಲ್ಲಿ ತಂಗಿರುವ ಬಸ್ಗಳು 12 ಗಂಟೆಯ ಒಳಗೆ ಸುಮಾರಿಗೆ ಡಿಪೋ ಸೇರಲಿವೆ ನಂತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ನೌಕರರು ತಿಳಿಸಿದ್ದಾರೆ.
ಹೋರಾಟದ ಸಮಯದಲ್ಲಿ ಬಂಧಿಸಿದ ನೌಕರರನ್ನು ಪೊಲೀಸರು ರಾತ್ರಿ 9 ಗಂಟೆ ವೇಳೆಗೆ ಬಿಡುಗಡೆ ಮಾಡಿದ್ದಾರೆ. ನಮ್ಮ ಬೇಡಿಗೆಗೆ ಸರ್ಕಾರ ಸ್ಪಂದಿಸುವ ತನಕ ಈ ಹೋರಾಟ ಮುಂದುವರಿಯಲಿದೆ. ಅಲ್ಲಿಯ ತನಕ ಬಸ್ ಸಂಚಾರ ಆರಂಭ ಆಗುವುದಿಲ್ಲ’ ಎಂದು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.