ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಿಸಿ ಹಣ ದೋಚಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನ.25ರಂದು ಕೋಲಾರದಲ್ಲಿರುವ ಫಾರ್ಮ್ ಹೌಸ್ ನಿಂದ ಹಿಂತಿರುಗುತ್ತಿದ್ದ ವೇಳೆ ಈ ಆರು ಮಂದಿ ವರ್ತೂರ್ ಪ್ರಕಾಶ್ ಮತ್ತು ಅವರ ಚಾಲಕ ಸುನೀಲ್ ಅವರನ್ನು ಅಪಹರಣಗೈದಿದ್ದರು.
ನಾಲ್ಕು ಮಂದಿಯನ್ನು ಬೆಂಗಳೂರಿನಿಂದ ಬಂಧಿಸಲಾಗಿದೆ. ಈ ಮೊದಲು ಇಬ್ಬರನ್ನು ಬಂಧಿಸಲಾಗಿದ್ದು, ಅವರು ನೀಡಿದ ಮಾಹಿತಿಯಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ. ಆದರೆ ಇದರ ಪ್ರಮುಖ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿರುವರು.