ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ನಟ ವಿಜಯ್ ರಂಗರಾಜು ಅವರ ವಿರುದ್ಧ ಇಡೀ ಸ್ಯಾಂಡಲ್ವುಡ್ ತಿರುಗಿ ಬಿದ್ದಿತ್ತು. ಶುಕ್ರವಾರವಷ್ಟೇ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಜತ್ಕರ್ ಅವರು ವಿಜಯ್ ರಂಗರಾಜು ನೀಡಿದ ಹೇಳಿಕೆಯನ್ನು ಹಿಂಪಡೆಯುವಂತೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೆ ಸ್ಯಾಂಡಲ್ವುಡ್ ದಿಗ್ಗಜರ್ ಎನಿಸಿಕೊಂಡ ನಟ ಸುದೀಪ್, ಪುನೀತ್ ರಾಜಕುಮಾರ್, ಶ್ರೀಮುರಳಿ ಮುಂತಾದವರು ವಿರೋಧ ವ್ಯಕ್ತಪಡಿಸಿದ್ದರು ಹೇಳಿಕೇಳಿ ಹಿಂಪಡೆಯುವಂತೆ ಹೇಳಿದ್ದರು.
ಇದೀಗ ಕೊನೆಗೂ ರಂಗರಾಜು ಕರ್ನಾಟಕದ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಮಂಡಿ ಊರಿ ಕ್ಷಮೆಕೋರಿದ್ದಲ್ಲದೆ ತನು ಮಾಡಿರುವ ತಪ್ಪಿಗೆ ಈಗ ಪಶ್ಚಾತ್ತಾಪವನ್ನು ಅನುಭವಿಸುತ್ತಿದ್ದೇನೆ. ತನಗೆ ಕೋರೋಣ ಬಂದಿದೆ. ಇದು ತನ್ನ ತಪ್ಪಿಗೆ ಬಂದಿರುವ ಶಿಕ್ಷೆಯೆಂದು ಭಾವಿಸುತ್ತೇನೆ. ನಿಮ್ಮೆಲ್ಲರಲ್ಲೂ ನಾನು ಮಂಡಿ ಊರಿ ಕ್ಷಮೆ ಕೇಳುತ್ತೇನೆ. ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿರುವ ನಾನು ಅಂತ ದೊಡ್ಡ ಶ್ರೀಮಂತನೇ ಅಲ್ಲ. ಅಂಥ ದೊಡ್ಡ ವ್ಯಕ್ತಿಗಳ ಬಗ್ಗೆ ಮಾತನಾಡುವ ಮುನ್ನ ಆಲೋಚಿಸಬೇಕಿತ್ತು ಎಂದು ಅಂಗಲಾಚಿ ಜನತೆ ಬಳಿ ಕ್ಷಮೆ ಕೋರಿ ಮಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.