ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಇಂದು ಕೊನೆ ಹಾಡಿದ ರಾಜ್ಯ ಸರಕಾರ. ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆ ಯಶಸ್ವಿಯಾಗಿದ್ದು, ಕೆಎಸ್ ಆರ್ ಟಿಸಿ ಸಂಘದ ರಾಜ್ಯಧ್ಯಕ್ಷ ಚಂದ್ರು ಮುಷ್ಕರ ಕೈ ಬಿಡುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಸಾರಿಗೆ ಸಂಚಲನ ಇಂದು ರಾತ್ರಿಯಿಂದಲೇ ಆರಂಭವಾಗಲಿದ್ದು, ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತದೆ. ಸರಕಾರ ನಮ್ಮ ಬೇಡಿಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದು, ಸಾರಿಗೆ ನೌಕರರಿಗಾಗಿ ಪರಿಗಣನೆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಘದ ರಾಜ್ಯಧ್ಯಕ್ಷ ಚಂದ್ರು ಹೇಳಿದರು.
ಈ ಬಗ್ಗೆ ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ, ನೌಕರರು ಮುಂದಿಟ್ಟಿದ್ದ ಹತ್ತರಿಂದ ಹನ್ನೆರಡು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಅದರಲ್ಲಿ ಎಲ್ಲವನ್ನು ಪೂರೈಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ವ್ಯವಸ್ಥೆಗಳನ್ನು ಶೀಘ್ರದಲ್ಲೇ ಜಾರಿಗೊಳಿಸುತ್ತೇವೆ. ಸಂಜೀವಿನಿ ಯೋಜನೆಯಡಿ ಕೊರೊನಾದಿಂದ ಮೃತಪಟ್ಟ ನೌಕರರಿಗಾಗಿ ಪರಿಹಾರ ಒದಗಿಸುತ್ತೇವೆ ಎಂದು ತಿಳಿಸಿದರು.