ಬೆಂಗಳೂರು: ನಿನ್ನೆ ದಿನವಿಡಿ ನಡೆದ ಸಾರಿಗೆ ನೌಕರರು ಹಾಗೂ ಸರ್ಕಾರ ನಡುವಿನ ಮಾತುಕತೆಯು ವಿಫಲವಾಗಿದ್ದು, ಇಂದು ಮುಷ್ಕರವು ನಾಲ್ಕನೇ ದಿನಕ್ಕೆ ತಲುಪಿದೆ.
ನಿನ್ನೆ ಸಂಜೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಬಸ್ ಸೇವೆಯು ಬೇಗನೆ ಆರಂಭವಾಗಲಿದೆ ಎಂದು ಹೇಳಿದ್ದರು. ಆದರೆ ನೌಕರರ ಸಂಘಟನೆಗಳು ಮಾತುಕತೆ ವಿಫಲವಾಗಿದೆ ಎಂದು ಹೇಳಿದ್ದು, ಮುಷ್ಕರ ಮುಂದುವರಿಸಿದೆ.
ಕೆಎಸ್ ಆರ್ ಟಿಸಿ ನೌಕರರು ಸರ್ಕಾರಿ ನೌಕರರು ಎಂದು ಘೋಷಣೆ ಆಗುವ ತನಕ ಮುಷ್ಕರ ಮುಂದುವರಿಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮುಷ್ಕರವು ನಡೆಯುತ್ತಿದೆ.