ಬೆಂಗಳೂರು: ಸಾವಿನ ಅಂಚಿನಿಂದ ಮಹಿಳಾ ಉಪನ್ಯಾಸಕಿ ಮತ್ತು ವಿದ್ಯಾರ್ಥಿಯನ್ನು ರಕ್ಷಿಸಿದ ರೈಲ್ವೆ ಸಂರಕ್ಷಣಾ ಸಿಬ್ಬಂದಿ.
ಹುಬ್ಬಳ್ಳಿ ಮೂಲದ 19 ವರ್ಷದ ಕಾಲೇಜು ವಿದ್ಯಾರ್ಥಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ 2.30ರ ವೇಳೆಗೆ ಪ್ಲಾಟ್ ಫಾರಂ ನಲ್ಲಿ ರೈಲು ಹತ್ತುವ ವೇಳೆ ಕಾಲು ಜಾರಿ ಆಕಸ್ಮಿಕವಾಗಿ ಹಳಿಯ ಮೇಲೆ ಬಿದ್ದ ಘಟನೆ ನಡೆದಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಕಾರ್ಯಪ್ರವೃತ್ತರಾದ ಮುಖ್ಯ ಪೇದೆ ಎಸ್ ಎಂ ಜಾಲಿಹಾಳ್ ಅವರು ವಿದ್ಯಾರ್ಥಿಯ ಜೀವವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೊಂದೆಡೆ ಪ್ರಾಣ ಕಳೆದುಕೊಳ್ಳಲು ರೈಲಿನತ್ತ ಮುಂದಾಗುತ್ತಿದ್ದ 29 ವರ್ಷದ ಮಹಿಳೆ ನಗರದ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು ಉಪನ್ಯಾಸಕಿಯನ್ನು ಪೊಲೀಸರ ಮುಂದಾಗಿ ರಕ್ಷಿತಾ ಪ್ರಕರಣ ಹೊರಬಂದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ವಯಕ್ತಿಕ ಸಮಸ್ಯೆ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು, ಹೀಗಾಗಿ ಸಾಯಲು ಹೊರಟಿದ್ದರು, ನಂತರ ಆಕೆಗೆ ಕೌನ್ಸೆಲಿಂಗ್ ಮಾಡಿ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.