ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಸೂತ್ರಧಾರನನ್ನು ಪೊಲೀಸರು ಬಂಧಿಸಿರುವರು.
ಕೋಲಾರ ಪೊಲೀಸರು ರೌಡಿ ಶೀಟರ್ ಕವಿರಾಜ್ ಎಂಬಾತನನ್ನು ವರ್ತೂರ್ ಪ್ರಕಾಶ್ ಹಾಗೂ ಅವರ ಚಾಲಕನ ಅಪಹರಣ ನಡೆಸಿದ ಆರೋಪದ ಮೇಲೆ ಬಂಧಿಸಿರುವರು.
ಇವರಿಬ್ಬರನ್ನು ಕವಿರಾಜ್ ಮತ್ತು ಆತನ ಸಹಚರರು ನ.25ರಂದು ಕೋಲಾರ ನಗರ ಹೊರವಲಯದಲ್ಲಿರುವ ಫಾರ್ಮ್ ಹೌಸ್ ನಿಂದ ಅಪಹರಿಸಿದ್ದರು.
ತಮಿಳುನಾಡಿನ ಹೊಸೂರಿನವನಾಗಿರುವ ಕವಿರಾಜ್ ತಾನು ಭೂಗತ ಪಾತಕಿ, ಬಂಧಿತ ರವಿ ಪೂಜಾರಿ ಪರ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.