ಬೆಂಗಳೂರು: ವಿಧಾನ ಪರಿಷತ್ನಲ್ಲಿ ಇಂದು ಮಂಡನೆಯಾಗಲಿರುವ ಗೋಹತ್ಯೆ ನಿಷೇಧ ಮಸೂದೆ-2020ಕ್ಕೆ ಜೆಡಿಎಸ್ ವಿರೋಧ ಇದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ‘ಬಿಜೆಪಿ ಸರ್ಕಾರ ಮಂಡಿಸುತ್ತಿರುವ ಮಸೂದೆಯು ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಲಿದೆ. ಶಾಂತಿಯನ್ನು ಕೆದುಕುತ್ತಿದೆ ಹಾಗಾಗಿ ನಮ್ಮ ಪಕ್ಷ ಸಂಪೂರ್ಣವಾಗಿ ಮಸೂದೆಯನ್ನು ವಿರೋಧಿಸಲಿದೆ’ ಎಂದಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ-1964 ಜಾರಿಯಲ್ಲಿದೆ. 2010ರಲ್ಲೂ ಕಾಯ್ದೆಯಲ್ಲಿ ಬದಲಾವಣೆ ಮಾಡಲು ಆಗಿನ ಬಿಜೆಪಿ ಸರ್ಕಾರ ಪ್ರಯಾಣಿಸಿ ಆಗ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜತೆಯಾಗಿ ಇದನ್ನ ವಿರೋಧಿಸಿದ್ದವು. ನಂತರ ಸರ್ಕಾರದ ನೇತೃತ್ವ ಬದಲಾಗಿದ್ದರಿಂದ ಹಳೆಯ ಕಾಯ್ದೆಯೇ ಈಗಲೂ ಜಾರಿಯಲ್ಲಿದೆ ಎಂದಿದ್ದಾರೆ.
2010ರಲ್ಲು ಜೆಡಿಎಸ್ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿತ್ತು ಈಗಲೂ ವಿರೋಧಿಸುತ್ತದೆ ಎಂದಿದ್ದಾರೆ. ಈ ಕುರಿತು 1964ರ ಕಾಯ್ದೆಯಲ್ಲೇ ಗೋಹತ್ಯೆ ತಡೆಗೆ ಸಾಕಷ್ಟು ಅವಕಾಶಗಳಿವೆ ಅವುಗಳನ್ನೇ ಮುಂದುವರೆಸುವಂತೆ ಹೇಳಿದ್ದಾರೆ.