ಬೆಂಗಳೂರು: ಮೃತ ಸರ್ಕಾರಿ ನೌಕರನ ಅವಲಂಬಿತ ಕುಟುಂಬ ಸದಸ್ಯರಿಗೆ ಅನುಕಂಪಾಧಾರಿತ ಉದ್ಯೋಗ ಅವಕಾಶ ನೀಡಲಾಗುತ್ತಿದ್ದು, ಇನ್ನು ಮುಂದೆ ವಿವಾಹಿತ ಮಗಳಿಗೂ ದೊರೆಯಲಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಈವರೆಗೂ ಅನುಕಂಪ ಆಧಾರಿತ ಉದ್ಯೋಗ ಅವಕಾಶವನ್ನು ಪತ್ನಿ, ಪುತ್ರ ಅಥವಾ ಅವಿವಾಹಿತ ಮಗಳಿಗೆ ನೀಡಲಾಗುತ್ತಿತ್ತು. ಆದರೆ ಅದು ಹೆಣ್ಣು ಮಕ್ಕಳಿಗೆ ತೋರುವ ತಾರತಮ್ಯ ಎಂದು ಅಭಿಪ್ರಾಯಪಟ್ಟಿರುವ ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠ ಈ ಹೊಸ ತೀರ್ಪನ್ನು ನೀಡಿದೆ.
ಭುವನೇಶ್ವರಿ ಪುರಾಣಿಕೆ ಅವರ ರಿಟ್ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಹೈಕೋರ್ಟ್ ವಿವಾಹಿತ ಪುತ್ರಿಗೂ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಸಂಬಂಧ ಮಹತ್ವದ ತೀರ್ಪು ಕೊಟ್ಟಿದೆ.