ಬೆಂಗಳೂರು: ಸಿಐಡಿ ಮಹಿಳಾ ಅಧಿಕಾರಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಸಂಭವಿಸಿದೆ.
2014ರ ಕೆಪಿಎಸ್ ಸಿ ಬ್ಯಾಚ್ ನಲ್ಲಿ ಟ್ರೈನಿಂಗ್ ಪಡೆದು ಅಧಿಕಾರಿಯಾಗಿ ಹೊರಹೊಮ್ಮಿದ ಲಕ್ಷ್ಮಿ ವಿ, 2017ರಲ್ಲಿ ಸಿಐಡಿ ಡಿ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ನೆನ್ನೆ ರಾತ್ರಿ ಊಟಕ್ಕೆಂದು ಪರಿಚಯಸ್ಥರ ಮನೆಗೆ ಹೋದವರು ಅಲ್ಲೇ ನೇಣಿಗೆ ಶರಣಾಗಿದ್ದಾರೆ.
ಲಕ್ಷ್ಮಿ ಅವರ ಆತ್ಮಹತ್ಯೆಯ ಕುರಿತು ತನಿಖೆ ಆರಂಭವಾಗಿತ್ತು ಇದೀಗ ಹಲವಾರು ಅನುಮಾನಗಳಿಗೆ ಆಸ್ಪದವನ್ನು ಮಾಡಿಕೊಡುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಈ ಕುರಿತಾದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.