ಬೆಂಗಳೂರು: ಸದಾ ವಿವಾದಗಳಿಂದಲೇ ಸುದ್ದಿಯಾಗಿರುವ ನಿತ್ಯಾನಂದ ಸ್ವಾಮಿಯ ಹೊಸ ಹೇಳಿಕೆ. ತನ್ನ ದೇಶಕ್ಕೆ ಬರಲು ಭಕ್ತರಿಗೆ ಕರೆ ನೀಡಿದ ಸ್ವಾಮಿ.
ಫೇಸ್ಬುಕ್ನಲ್ಲಿ ಉಪನ್ಯಾಸ, ಸತ್ಸಂಗದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುವ ನಿತ್ಯಾನಂದ ಸ್ವಾಮಿ ಇದೀಗ ಅದೇ ವಿಡಿಯೋದ ಮೂಲಕ ಭಕ್ತರಿಗೆ ತನ್ನ ಹೊಸ ದೇಶ ಕೈಲಾಸಕ್ಕೆ ಬರುವಂತೆ ಆವ್ಹಾನ ನೀಡಿದ್ದಾರೆ.
“ಆಸ್ಪ್ರೇಲಿಯಾಕ್ಕೆ ವೀಸಾ ತೆಗೆದುಕೊಂಡು ಬನ್ನಿ. ಅಲ್ಲಿಂದ ನಮ್ಮ ಪ್ರೈವೇಟ್ ಚಾರ್ಟೆಟ್ ಪ್ಲೇನ್ನಲ್ಲಿ ನಿಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಬರಲಾಗುವುದು. ಇದರ ಜತೆ ನಮ್ಮ ಕೈಲಾಸಕ್ಕೆ ಬರಲು ವೀಸಾಕ್ಕೆ ಯಾವುದೇ ಶುಲ್ಕವಿಲ್ಲ” ಎಂದೂ ಆತ ಹೇಳಿದ್ದಾನೆ.
ಹಲವಾರು ವಾದ-ವಿವಾದ ಹಾಗೂ ಪ್ರಕರಣಗಳಲ್ಲಿ ನಿತ್ಯಾನಂದ ಸ್ವಾಮಿಯ ಹೆಸರು ಪದೇಪದೇ ಕೇಳಿಬರುತ್ತಿತ್ತು. ಅಂತಹ ವಿವಾದದ ಸಾಲಿಗೆ ಮತ್ತೊಂದು ಹೇಳಿಕೆ ಸೇರ್ಪಡೆಯಾಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.