ಬೆಂಗಳೂರು: ಕೋವಿಡ್ 19ನಿಂದಾಗಿ 2021ರ ಫೆ.3ರಿಂದ ಫೆ.7ರ ತನಕ ಆಯೋಜಿಸಲಾಗುತ್ತಿರುವ ಏರೋ ಇಂಡಿಯಾ ಶೋಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿದುಬಂದಿದೆ.
2019ರ ಏರೋ ಶೋಗೆ ಹೋಲಿಕೆ ಮಾಡಿದರೆ ಮುಂದಿನ ವರ್ಷದ ಏರೋ ಶೋದಲ್ಲಿ ಅರ್ಧದಷ್ಟು ವಿದೇಶಿ ಕಂಪೆನಿಗಳು ಮಾತ್ರ ಭಾಗಿಯಾಗುತ್ತಲಿವೆ. ಆದರೆ ದೇಶೀಯ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿವೆ.
2019ರಲ್ಲಿ 165 ವಿದೇಶಿ ಕಂಪೆನಿಗಳು ಇದರಲ್ಲಿ ಭಾಗಿಯಾಗಿದ್ದವು. ಆದರೆ ಈ ವರ್ಷ ಇದು 67ಕ್ಕೆ ಇಳಿದಿದೆ. ಕೋವಿಡ್ 91ನಿಂದ ಹಲವಾರು ನಿಯಮಾವಳಿಗಳು ಜಾರಿಯಲ್ಲಿರುವ ಕಾರಣದಿಂದಾಗಿ ಹೀಗೆ ಆಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವರು.