ಬೆಂಗಳೂರು: ಕೊರೋನಾ ರೂಪಾಂತರ ಹಾಗೂ ಹರಡುವಿಕೆಯ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಆನಂತರ, ಆತಂಕಕಾರಿ ವಿಷಯವನ್ನು ಹೊರಹಾಕಿದೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್.
ಇಂದಿನ ಸುದ್ದಿಗೋಷ್ಠಿಯಲ್ಲಿ, ರೂಪಾಂತರಗೊಂಡಿರುವ ಕೊರೋನಾದ ಬಗ್ಗೆ ಮಾಹಿತಿ ನೀಡುತ್ತಾ ಸಚಿವ, ಭಾನುವಾರ ಏರ್ ಇಂಡಿಯಾ ವಿಮಾನದಲ್ಲಿ ಇಂಗ್ಲೆಂಡ್ ನಿಂದು ಬೆಂಗಳೂರಿಗೆ 246 ಜನ ಬಂದಿರುವುದಾಗಿಯೂ, ಅದರಲ್ಲಿ 138 ಮಂದಿ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಇರಿಸಿಕೊಳ್ಳದೆ ಪ್ರಯಾಣಿಸುವ ಬಗ್ಗೆ ತಿಳಿಸಿದರು.
ಇಂಗ್ಲೆಂಡ್ ನಲ್ಲಿ ರೂಪಾಂತರ ಹೊಂದಿರುವ ಹೊಸ ಕರೋನವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೆಡೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ನಿನ್ನ ಬಂದ ಎಲ್ಲರನ್ನೂ ಒಂದು ವಾರ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದೆ. ಇಷ್ಟೇ ಅಲ್ಲದೆ ಅವರೆಲ್ಲರ ಮೇಲೆ ನಿಗಾ ಇರಿಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಸ್ಪಂದಿಸಿದ್ದು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಹೇಳಿದರು.