ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಯಲ್ಲಿ 1985ರಿಂದ ನಡೆದಿರುವಂತಹ ಹಗರಣಗಳ ಬಗ್ಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ತನಿಖೆ ನಡೆಸಬೇಕು ಎಂದು ಬಿಡಿಎ ಕಾರ್ಯಾಧ್ಯಕ್ಷ ಎಸ್ ಆರ್ ವಿಶ್ವನಾಥ್ ಅವರು ಪ್ರಸ್ತಾಪಿಸಿರುವರು.
ಅಧಿಕಾರಿಗಳು ಸಾವಿರಾರು ಹಗರಣದಲ್ಲಿ ತೊಡಗಿದ್ದು, ದೊಡ್ಡ ಮಟ್ಟದಲ್ಲಿ ಹಣ ನುಂಗಿ ಹಾಕಿರುವರು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವಿಶ್ವನಾಥ್ ತಿಳಿಸಿದರು.
ಬಿಡಿಎ ಗುಪ್ತಚರ ಇಲಾಖೆಯು ಕೆಲವು ಕಚೇರಿಗಳಿಗೆ ದಾಳಿ ಮಾಡಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿವೆ.