ಬೆಂಗಳೂರು: ಈಗಾಗಲೇ ನಿಗದಿಯಾಗಿರುವಂತೆ ಜನವರಿ 1ರಿಂದಲೇ 10ನೇ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವುದಾಗಿ, ಅದರಲ್ಲಿ ಯಾವುದೇ ಗೊಂದಲ ಬೇಡ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು.
ರಾಜ್ಯದಲ್ಲಿ ಮತ್ತೆ ಎಲ್ಲೆಡೆ ಕೋರೋನ ತಲೆಯೆತ್ತಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಹಾಗೂ ರೂಪಾಂತರ ಗೊಂಡಿರುವ ಕೊರೋನಾದ ಇನ್ನೊಂದು ಅಲೆಯ ಭೀತಿಯಿಂದ ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಗೊಂದಲದ ಮಾತುಗಳು ಕೇಳಿಬರುತ್ತಿತ್ತು. ಆದರೆ ಆ ಗೊಂದಲ ಹಾಗೂ ಅನುಮಾನಗಳಿಗೆ ಸುರೇಶ್ ಕುಮಾರ್ ಉತ್ತರ ನೀಡಿ ಬಗೆಹರಿಸಿದ್ದಾರೆ.
ಜನವರಿ 1 ರಿಂದಲೇ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಳ್ಳುತ್ತದೆ. ಆರಂಭಿಕ ಕ್ರಮಗಳ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಸುರೇಶ್ ಕುಮಾರ್, ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಸೂಕ್ತ ಕ್ರಮಗಳನ್ನು ಅವರ ವ್ಯಾಪ್ತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.