ಬೆಂಗಳೂರು: ಧೃವ ಸರ್ಜಾ ನಟನೆಯ ‘ಪೊಗರು’ ಸಿನಿಮಾದ ನಿರ್ಮಾಪಕ ಬಿ.ಕೆ.ಗಂಗಾಧರ್ ಮನೆ ಹಾಗೂ ಅವರ ಗಾಂಧಿ ನಗರದಕಚೇರಿ ಮೇಲೆ ಇಂದು ಸಂಜೆ ವೇಳೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಎಸಿ ಹಾಗೂ ಓರ್ವ ಮಹಿಳಾ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳಿದ್ದ ತಂಡ ಡಿಸೆಂಬರ್ 23ರಂದು ದಾಳಿಮಾಡಿದ್ದು, ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ದಾಳಿ ಮಾಡಿರುವ ಅಧಿಕಾರಿಗಳು ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಅಧಿಕಾರಿಗಳು ಎಂದು ಹೇಳಲಾಗುತ್ತದೆ.
ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾದ ಬಿ.ಕೆ.ಗಂಗಾಧರ್ ಪೊಗರು ಅಲ್ಲದೆ ಮುನ್ನಾಅಧ್ಯಕ್ಷ ಹಾಗೂ ಇನ್ನೂ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.