ಬೆಂಗಳೂರು: ಸುರಕ್ಷಾ ನಗರ ಪ್ರಾಜೆಕ್ಟ್ ನ ಟೆಂಡರ್ ನಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಲ್ಕರ್ ಅವರು ಡಿ. ರೂಪಾ ವಿರುದ್ಧ ಆರೋಪ ಹೊರಿಸಿದ್ದು, ಇದರ ತನಿಖೆ ನಡೆಯಲಿದೆ.
ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಇದರ ತನಿಖೆ ನಡೆಸಲಿರುವರು. ನಿಂಬಾಲ್ಕರ್ ಅವರು ನಿರ್ಭಯಾ ಸ್ಕೀಮ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಮಾತನಾಡಿರುವ ಡಿ. ರೂಪಾ ಅವರು, ನಾನು ಸರ್ಕಾರದ ಹಣ ಉಳಿಸಲು ಪ್ರಯತ್ನಿಸಿದ್ದೇವೆ. ಈ ಸ್ಕೀಮ್ ನಿಂದ ನಿಂಬಾಲ್ಕರ್ ಅವರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿರುವರು.