ಬೆಂಗಳೂರು: ನಿಮ್ಹಾನ್ಸ್ ನ ನೂತನ ನಿರ್ದೇಶಕರಾಗಿ ಕೇಂದ್ರ ಸರ್ಕಾರವು ಎಂ.ವಿ. ಪದ್ಮ ಶ್ರೀವಾಸ್ತವ್ ಅವರನ್ನು ನೇಮಕ ಮಾಡಿದೆ.
ಮೂರು ತಿಂಗಳ ಮೊದಲು ಡಾ. ಬಿ.ಎನ್. ಗಂಗಾಧರ್ ಅವರು ನಿವೃತ್ತರಾಗಿದ್ದು, ಅವರ ಸ್ಥಾನವನ್ನು ಅಲಂಕರಿಸಲಿರುವರು.
ಪದ್ಮ ಶ್ರೀವಾಸ್ತವ್ ಅವರು ದೆಹಲಿಯ ಏಮ್ಸ್ ನ ನರವಿಜ್ಞಾನ ಕೇಂದ್ರದ ಮುಖ್ಯಸ್ಥರಾಗಿದ್ದರು. ಇವರು ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗಿರುವರು.