ಬೆಂಗಳೂರು: ಬಿಬಿಎಂಪಿ ಮಾರ್ಷಲ್ಗಳ ಎಡವಟ್ಟಿನಿಂದ ಶಾಸಕರು ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಗೆ 500 ಬದಲು 50,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ರಸೀದಿ ನೀಡಲಾಗಿದೆ.
ಶಾಸಕ ರಾಜುಗೌಡ ಪ್ರಯಾಣಿಸುತ್ತಿದ್ದ ಕಾರ್ನ ತಡೆದ ಮಾರ್ಷಲ್ಗಳು ಅದರಲ್ಲಿ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ ಇರುವುದನ್ನು ಗಮನಿಸಿದ್ದಾರೆ. ಹಾಗಾಗಿ, ಅವರಿಗೆ ದಂಡ ವಿಧಿಸಲು ಮುಂದಾಗಿ ರಸೀದಿಯಲ್ಲಿ ಐನೂರರ ಬದಲು 50 ಸಾವಿರ ಎಂದು ನಮೂದಿಸಿದ್ದಾರಂತೆ.
ರಸೀದಿಯನ್ನು ಕಂಡ ವ್ಯಕ್ತಿ ಆತಂಕಕ್ಕೀಡಾಗಿದಾನೆ. ಆದರೆ ಈ ಘಟನೆ ಬೆಳಕಿಗೆ ಬಂದ ನಂತರ ಪಾಲಿಕೆಯವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು 500ರೂ ಮಾತ್ರ ದಂಡ ಹಾಕಲಾಗಿದೆ. ರಸೀದಿಯಲ್ಲಿ ತಪ್ಪಾಗಿ ನಮೂದಿಸಲಾಗಿದೆ ಎಂದು ಹೇಳಿದರು.