ಬೆಂಗಳೂರು: ಹೊಸ ರೂಪ ಕೊರೋನ ಹಾಗೂ ಹೊಸವರ್ಷದ ನಡುವೆಯೇ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಮಹತ್ವದ ಸೂಚನೆಯನ್ನು ಕೊಟ್ಟಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್.
ಜನವರಿ 1 ರಿಂದ ಶಾಲಾ-ಕಾಲೇಜುಗಳು ಆರಂಭವಾಗುವ ಬಗ್ಗೆ ತಿಳಿಸಿರುವ ಸಚಿವ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭವಾಗುತ್ತದೆ ಹಾಗೂ ಶಾಲೆಗೆ ಬರುವ ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ ಎಂದು ತಿಳಿಸಿದರು.
ಕೆಲ ತಿಂಗಳಿನಿಂದ ರಾಜ್ಯದಲ್ಲಿ ಶಾಲೆಗಳು ಇರಲಿಲ್ಲ. ರಾಜ್ಯದ ಮಕ್ಕಳಿಗೆ ಅದರಲ್ಲೂ ಹೆಚ್ಚಾಗಿ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣಕ್ಕೆ, ಕಲಿಕೆಗೆ ತುಂಬಾ ತೊಂದರೆ ಆಗುತ್ತಿದೆ. ಇಲಾಖೆಯಿಂದ ಚಂದನವಾಹಿನಿಯಲ್ಲಿ ಪ್ರಕಟಿಸುತ್ತಿರುವಕಲಿಕೆಗೆ ಸಂಬಂಧಪಟ್ಟಂತಹ ಪಠ್ಯಗಳನ್ನು ಮಕ್ಕಳು ನೋಡುತ್ತಿದ್ದಾರೆ. ಆದರೆ ಇದೀಗ ಜನವರಿ1ರಿಂದ ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ಆರಂಭಿಸುವ ತಯಾರಿ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿತಯ ಸಲಹೆಯನ್ನು ಪಡೆಯಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳಿಗೆ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುವುದು. ಉಳಿದ 6,7,8 ಹಾಗೂ 9 ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ನಡೆಸಲಾಗುವುದು ಎಂಬ ಖಚಿತ ಮಾಹಿತಿಯನ್ನು ನೀಡಿದರು.