ಬೆಂಗಳೂರು: ಮೆಜೆಸ್ಟಿಕ್ ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಾಲ್ಸ್ಟೇಷನ್ವರೆಗೆ (ಕೆಐಎಡಿ) ಎಲ್ಲರೂ ನಿರೀಕ್ಷಿಸುತ್ತಿದ್ದ ಉಪನಗರ ರೈಲು ಸೇವೆ ಜನವರಿ 4ರಿಂದ ಆರಂಭಗೊಳ್ಳಲಿದೆ.
ದೇವನಹಳ್ಳಿಯಿಂದ ಮೂರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣ ಮತ್ತು ಬಂಗಾರಪೇಟೆಯಿಂದ (ಬಿಡಬ್ಲ್ಯುಟಿ) ತಲಾ ಎರಡು, ಯಲಹಂಕ (ವೈಎಲ್ಕೆ), ಯಶವಂತಪುರ (ವೈಪಿಆರ್) ಹಾಗೂ ಬೆಂಗಳೂರು ಕಂಟೋನ್ಮೆಂಟ್ನಿಂದ (ಬಿಎನ್ಸಿ) ತಲಾ ಒಂದು ರೈಲು ಈ ಮಾರ್ಗದಲ್ಲಿ ಸಂಚರಿಸಲಿವೆ. ನಗರದ ವಿವಿಧೆಡೆಯಿಂದ ಹಾಲ್ಸ್ಟೇಷನ್ವರೆಗೆ ಒಟ್ಟು ಹತ್ತು ರೈಲುಗಳು ಕಾರ್ಯಾಚರಿಸಲಿವೆ.
ಸೋಮವಾರ ಬೆಳಿಗ್ಗೆ 4.41ರಿಂದ ಮೊದಲ ರೈಲು ಕೆಎಸ್ಆರ್ನಿಂದ ಕೆಐಎಡಿಗೆ ಹೊರಡಲಿದೆ. ದಟ್ಟಣೆಯ ಸಂದರ್ಭದಲ್ಲಿ ಹೆಚ್ಚು ಸೇವೆ ನೀಡಲಾಗುತ್ತದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದರು.