ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶನಿಮಹದೇವಪ್ಪ ಕೊರೋನಾ ಸೋಂಕಿನಿಂದ ಇಂದು ಸಂಜೆ ನಿಧನರಾದರು. ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರನ್ನು ನಗರದ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
90 ವರ್ಷ ವಯಸ್ಸಿನ ಶನಿಮಹದೇವಪ್ಪ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾದರು.
ಚಿತ್ರರಂಗದ ಹಿರಿಯ ನಟರಾದ ಇವರು ಇವರಿಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಡೆಸಿದ್ದು, ತಮ್ಮ ಬಹುಪಾಲು ಚಿತ್ರವನ್ನು ಡಾ. ರಾಜಕುಮಾರ್ ಅವರೊಂದಿಗೆ ನಟಿಸಿದ್ದರು. ಅದರಲ್ಲಿಯೂ ಮುಖ್ಯವಾಗಿ ಕವಿರತ್ನ ಕಾಳಿದಾಸ, ಶ್ರೀನಿವಾಸ ಕಲ್ಯಾಣ, ಭಕ್ತಪ್ರಹಲ್ಲಾದ ಹೀಗೆ ಮುಂತಾದ ಪೌರಾಣಿಕ ಸಿನಿಮಾಗಳಲ್ಲಿ ಇವರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.
ನಟ ಮಹದೇವಪ್ಪ ಅವರ ಅಂತ್ಯಕ್ರಿಯೆಯನ್ನು ಸೋಮವಾರ ಸೋಮನಹಳ್ಳಿಯ ಚಿತ್ರರಂಗದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.