ಬೆಂಗಳೂರು: ನಕಲಿ ದಾಖಲೆಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿದ್ದು, ಅಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಅನೇಕ ದಾಖಲೆಗಳ ನಿರ್ಮಾಣ ಹಾಗೂ ಮಾರಾಟದ ಸಾಕ್ಷಿಗಳು ದೊರೆತಿವೆ.
ಕನಕಪುರ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಒಂದರ ಮೇಲೆ ದಾಳಿ ನಡೆಸಿದ ಸಿಸಿಬಿ ತಂಡ 10 ಮಂದಿ ಆರೋಪಿಗಳನ್ನು ಬಂಧಿಸಿದ್ದು, 9000 ಆಧಾರ್ ಕಾರ್ಡ್, 6240 ವೋಟರ್ ಐಡಿ, 12200 ಆರ್ ಸಿ ರೆಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸರು ಇನ್ನು ಸಾಕ್ಷ್ಯಾಧಾರಗಳನ್ನು ಹುಡುಕುತ್ತಿದ್ದು, ಈ ಕೆಲಸಗಳ ಮೂಲ ಆಧಾರ ರಾಜಸ್ಥಾನ ಮೂಲದ ಕಮಲೇಶ್ ಎಂಬುವವನು ಎಂದು ಹೇಳಲಾಗುತ್ತಿದೆ.