ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಖಾತೆಯಿಂದ 1.25 ಕೋಟಿ ಹಣ ವರ್ಗಾವಣೆ ಆಗಿದೆ ಎಂಬ ಮಾತುಗಳು ಕೇಳುತ್ತಿತ್ತು. ಎಲ್ಲ ಮಾತುಗಳಿಗೆ ಹಾಗೂ ಪ್ರಶ್ನೆಗಳಿಗೆ ಉತ್ತರ ಸಲುವಾಗಿ ಇಂದು ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ನಡೆಸಿ ರಾಧಿಕಾ ಕುಮಾರಸ್ವಾಮಿ ಮಾತನಾಡಿದರು.
ಯುವರಾಜ್ ಕಡೆಯಿಂದ ನಮಗೆ ಯಾವುದೇ ಹಣ ಬಂದಿಲ್ಲ, ನಮ್ಮ ತಂದೆಯ ಕಾಲದಿಂದಲೂ ಅವರೂ ಪರಿಚಯವಿದೆ ಯುವರಾಜ್ ಅವರಿಗೆ ಸಂಬಂಧಪಟ್ಟಂತೆ ಕೇಳಿ ಬರುತ್ತಿರುವ ಆರೋಪ ಸಂಪೂರ್ಣ ಅರ್ಥರಹಿತ. ನಾಟ್ಯರಾಣಿ ಶಾಂತಲೆಗೆ ಸಂಬಂಧಪಟ್ಟಂತೆ ಐತಿಹಾಸಿಕ ಸಿನಿಮಾವನ್ನು ನಿರ್ಮಾಣವನ್ನು ಮಾಡುವುದಕ್ಕೆ ಸಂಬಂಧಪಟ್ಟಂತೆ ನಾನು ಅವರು ಮಾತನಾಡಿದ್ದೇವು. ಆದರೆ ಕೆಲವೊಂದು ಕಾರಣಗಳಿಂದ ಆ ಸಿನಿಮಾ ನಿಂತುಹೋಗಿದೆ. ಇನ್ 15 ಲಕ್ಷ ಅವರ ಅಕೌಂಟ್ ನನಗೆ ಯಾವ ಹಣವು ಬಂದಿಲ್ಲ. ಹಾಗೂ ನಾನು ಯಾರಿಗೂ ವಂಚಿಸಿಲ್ಲಿ. ಬದಲಾಗಿ ನಾನು ಹಲವರಿಂದ ಮೋಸ ಹೋಗಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು.
ಯುವರಾಜ್ ಕಷ್ಟದ ಸಮಯದಲ್ಲಿ ನಮ್ಮ ತಂದೆಯವರು, ಅವರಿಗೆ ಸಹಾಯ ಮಾಡಿದ್ದರು, ಇದಲ್ಲದೇ ಈ ಬಗ್ಗೆ ನಮ್ಮ ತಂದೆಯವರು ಹೇಳುತ್ತಿದ್ದರು, ಹಲವು ದಿವಸಗಳ ಬಳಿಕ ನಮ್ಮನ್ನು ಭೇಟಿಯಾಗಿ ಯುವರಾಜ್ ಸಿನಿಮಾ ಪ್ರಪೋಸಲ್ ಇಟ್ಟಿದ್ದರು ಅಂತ ಹೇಳಿದರು. ಯುವರಾಜ್ ಹಲವು ನಮ್ಮ ಕುಟುಂಬದ ಬಗ್ಗೆ ಹೇಳಿದ್ದ ಭವಿಷ್ಯ ಹೇಳಿದ್ದರು, ನನ್ನ 16ನೇ ವಯಸ್ಸಿನಲ್ಲಿ ನನ್ನ ಜೀವನದಲ್ಲಿ ಆಗಲಿರುವ ಅನೇಕ ಬದಲಾವಣೇ ಬಗ್ಗೆ ಆತ ಹೇಳಿದ್ದರು, ನನಗೆ ಹೆಣ್ಣು ಮಗುವಾಗುವ ಬಗ್ಗೆ ಕೂಡ ಆತ ಹೇಳಿದ್ದ, ಹೀಗಾಗಿ ಆತ ಸಿನಿಮಾ ನಿರ್ಮಾಣ ಮಾಡಬೇಕು ಅಂತ ಹೇಳಿದ್ದ ವೇಳೆಯಲ್ಲಿ ಒಪ್ಪಿಕೊಂಡಿದ್ದೇವೆ ಅಷ್ಟೆ ಹೊರತಾಗಿ ಬೇರೆ ಯಾವ ವಹಿವಾಟು ನಮ್ಮ ನಡುವೆ ಇಲ್ಲ ಎಂದು ತಿಳಿಸಿದರು.