News Kannada
Monday, February 06 2023

ಬೆಂಗಳೂರು ನಗರ

ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಹಾಗೂ ಕಾನ್ಸ್ಟೇಬಲ್

Photo Credit :

ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಹಾಗೂ ಕಾನ್ಸ್ಟೇಬಲ್

ಬೆಂಗಳೂರು: ಜಮೀನುದಾರರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದ ರೆವಿನ್ಯೂ‌ಇನ್ಸ್ ಪೆಕ್ಟರ್ ಹಾಗೂ ಚಿಕ್ಕಜಾಲ ಹೆಡ್ ಕಾನ್ಸ್​ಟೇಬಲ್ ರಾಜು ಎಂಬುವವರನ್ನು ಎಸಿಬಿ ಅಧಿಕಾರಿಗಳು ಭರ್ಜರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ವ್ಯಾಜ್ಯ ಪ್ರಕರಣದಲ್ಲಿ ಸಿಲುಕಿದ್ದರು. ಇದನ್ನು ಇತ್ಯರ್ಥಪಡಿಸಲು ಆರ್ ಐ ಪುಟ್ಟಹನುಮಯ್ಯ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜೊತೆಗೆ ಜಮೀನಿನ ವಿಚಾರಕ್ಕೆ ಸಂಬಂಧಪಟ್ಟಂತೆ ರಕ್ಷಣೆ ನೀಡಲು ಹೆಡ್ ಕಾನ್ಸ್​ಟೇಬಲ್ ರಾಜು 6 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಇದಕ್ಕೆ ಬಗ್ಗದ ಸದರಿ ಜಮೀನು ಮಾಲೀಕ, ಎಸಿಬಿಗೆ ದೂರು ನೀಡಿದ್ದರು. ದೂರುದಾರ ಕೊಟ್ಟ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಬೀಸಿದ ಜಾಲಕ್ಕೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.

ಈ ವೆಳೆಗೆ, ಹೆಡ್ ಕಾನ್ಸ್​ಟೇಬಲ್ ರಾಜುಗೆ ಹಣ ಪಡೆಯುವಂತೆ ಇನ್ಸ್​ಪೆಕ್ಟರ್ ಸೂಚಿಸಿದ್ದರು ಎಂದು ಹೇಳಿದ್ದು ಚಿಕ್ಕಜಾಲ ಇನ್ಸ್​ಪೆಕ್ಟರ್ ಯಶವಂತ್ ವಿರುದ್ಧ ಕೂಡ ಆರೋಪಗಳು ಕೇಳಿಬರುತ್ತದೆ. ರಾಜು ಹಾಗೂ ಆರ್ ಐ ಹನುಮಯ್ಯರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಇನ್ನೊಂದೆಡೆ, ಹಣ ಪಡೆಯುವಂತೆ ಸೂಚಿಸಿದ್ದ ಆರೋಪ ಹೊತ್ತಿರುವ ಇನ್ಸ್​ಪೆಕ್ಟರ್ ಯಶವಂತ್ ಠಾಣೆಯಿಂದ ನಾಪತ್ತೆಯಾಗಿದ್ದಾರೆ. ಇನ್ಸ್​ಪೆಕ್ಟರ್ ಯಶವಂತ್​ಗಾಗಿ ಹುಡುಕಾಟ ಶುರುವಾಗಿದೆ.

See also  testing 3 for live
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು