ಬೆಂಗಳೂರು: ಯುವರಾಜ್ ಸ್ವಾಮಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿರುವ ಜೊತೆಜೊತೆಗೆ, ಆತನೊಂದಿಗೆ ಸಂಬಂಧ ಹೊಂದಿದ್ದು ಹಲವಾರು ಗಣ್ಯ ವ್ಯಕ್ತಿಗಳ ಫೋಟೋಗಳು ಇದೀಗ ವೈರಲ್ ಆಗುತ್ತದೆ.
ಅಂತಹ ಹಲವು ಫೋಟೋಸ್ ಗಳಲ್ಲಿ ಸಚಿವ ವಿ.ಸೋಮಣ್ಣ ಜೊತೆ ಇರುವ ಫೋಟೋ ಒಂದಾಗಿದ್ದು, ಇದೀಗ ವಿ. ಸೋಮಣ್ಣ ಅವರು ಯುವರಾಜ್ ಮತ್ತು ತಮ್ಮ ಭೇಟಿಯ ಬಗ್ಗೆ ಮಾತನಾಡಿ, ಯುವರಾಜ್ ಎಂದಿಗೂ ನಮ್ಮ ಮನೆಗೆ ಬಂದಿರಲಿಲ್ಲ. ನಾನೇ ಅವರ ಮನೆಗೆ ಹೋಗಿದ್ದೆ ಎಂದೂ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಯುವರಾಜ್ ನಮ್ಮ ಕ್ಷೇತ್ರದಲ್ಲೇ ವಾಸವಾಗಿದ್ದರು. ತಮ್ಮ ಮನೆಗೆ ಒಮ್ಮೆ ಬರುವಂತೆ ತುಂಬ ಒತ್ತಾಯ ಮಾಡಿದ್ದ. ಹಾಗಾಗಿ ಅವರ ಮನೆಗೆ ಹೋಗಿ 5 ನಿಮಿಷಗಳ ಕಾಲ ಇದ್ದುಬಂದೆ. ತಿಂಡಿಯನ್ನೂ ಮಾಡಿದ್ದೇನೆ. ಆದರೆ ಅವರ ಮನೆಗೆ ಹೋಗಿದ್ದಾಗ ನಂಗೆ ಶಾಕ್ ಆಗಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ಇಷ್ಟೆಲ್ಲ ವ್ಯವಸ್ಥೆ ಇರಲು ಸಾಧ್ಯವೇ ಎಂದು ಯೋಚಿಸಿದ್ದೆ. ಆತನಿಂದ ನನಗೆ ಯಾವುದೇ ವ್ಯಕ್ತಿಯ ವಂಚನೆ ಆಗಿಲ್ಲ. ಈ ಬಗ್ಗೆ ಯಾವುದೇ ರೀತಿಯ ತನಿಖೆಗಳಿಗೆ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.