News Kannada
Tuesday, September 27 2022

ಬೆಂಗಳೂರು ನಗರ

ಜಾರಕಿಹೊಳಿ‌ ಸಿಡಿ ಪ್ರಕರಣ: ಕೋರ್ಟ್ ಗೆ ಅರ್ಜಿ ಸಲ್ಲಿಸಲು ಇರುವ ಶಾಸಕರು - 1 min read

Photo Credit :

ಜಾರಕಿಹೊಳಿ‌ ಸಿಡಿ ಪ್ರಕರಣ: ಕೋರ್ಟ್ ಗೆ ಅರ್ಜಿ ಸಲ್ಲಿಸಲು ಇರುವ ಶಾಸಕರು

ಬೆಂಗಳೂರು: ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಒಟ್ಟು 16 ಮಂದಿ ಶಾಸಕರು. ಅದರಲ್ಲಿ ಈಗಾಗಲೇ ನಾವು ಆರು‌ ಜನ ಸಚಿವರು ಕೋರ್ಟ್‌ಗೆ ಅರ್ಜಿ ಹಾಕಿದ್ದೇವೆ. ಉಳಿದ ಸಚಿವರು ಕೂಡಾ ಕೋರ್ಟ್‌ಗೆ ಅರ್ಜಿ ಹಾಕುತ್ತಾರೆ ಎಂದು ಸಹಕಾರ ಸಚಿವ ಎಸ್ .ಟಿ ಸೋಮಶೇಖರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರುರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ನಾನು ಗೃಹಮಂತ್ರಿ ಜೊತೆ ಸಹ ಮಾತನಾಡಿದ್ದೇನೆ. ಇಷ್ಟು ವರ್ಷ ರಾಜಕಾರಣದ ಮಾಡಿಕೊಂಡು ಬಂದಿದ್ದೇವೆ. ಆದರೆ ಕ್ಷಣ ಮಾತ್ರದಲ್ಲಿ ಟಿವಿಯಲ್ಲಿ ಏನೋ ಸುದ್ದಿ ಬಿತ್ತರಗೊಂಡರೆ ಹೇಗೆ?. ಆದ್ದರಿಂದ ಯಾವುದೇ ರೀತಿಯಲ್ಲಿ ನಮ್ಮ ತೇಜೋವಧೆ ಆಗಬಾರದು ಎಂಬ ಕಾರಣಕ್ಕೆ ನಾವುಗಳು ಕೋರ್ಟ್ ಗೆ ಹೋಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಅಷ್ಟೇ ಅಲ್ಲದೆ ಈ ಪ್ರಕರಣದ ಹಿಂದೆ ಹಲವಾರು ಉದ್ದೇಶಗಳಿಗೂ ಅದರಲ್ಲಿಯೂ ಮುಖ್ಯವಾಗಿ, ನಾವು ಮೈತ್ರಿ ಸರ್ಕಾರ‌ ಕೆಡವಿದ್ದೇವೆ ಎಂಬ ಕೋಪ ಹಲವರಲ್ಲಿ ಇದೆ. ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ತಂದಿದ್ದೇವೆ ಎಂಬ ಸಿಟ್ಟಿದೆ. ಹೀಗಾಗಿ ನಮ್ಮ ವಿರುದ್ಧ ತೇಜೋವಧೆ ಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.

See also  ಸಿಲಿಂಡರ್ ಸ್ಪೋಟ: ದಂಪತಿ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು