News Kannada
Monday, December 05 2022

ಬೆಂಗಳೂರು ನಗರ

ಕೈ ಸೇರಲಿರುವ ಮಧುಬಂಗಾರಪ್ಪ; ಪಕ್ಷಾಂತರದ ಕುರಿತು ಸ್ಪಷ್ಟನೆ

Photo Credit :

ಕೈ ಸೇರಲಿರುವ ಮಧುಬಂಗಾರಪ್ಪ; ಪಕ್ಷಾಂತರದ ಕುರಿತು ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸೇರುವುದರ ಬಗ್ಗೆ ಸ್ಪಷ್ಟೀಕರಣ ನೀಡಿದ ಮಾಜಿ ಶಾಸಕ ಮಧು ಬಂಗಾರಪ್ಪ. ಈ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್ ನಲ್ಲಿ ಬೆಳೆಯಲು ಅವಕಾಶವಿರುವುದರಿಂದ ಮನಸಾರೆ ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಎಂದಿದ್ದಾರೆ.

ನಾನು ಜೆಡಿಎಸ್ ನಲ್ಲಿ ಎಂದಿಗೂ ಅಧಿಕಾರ ಅನುಭವಿಸಿಲ್ಲ. ಬರಲಿರುವ ಎಪ್ರಿಲ್ ತಿಂಗಳಿನಲ್ಲಿ ಬೃಹತ್ ಸಮಾವೇಶ ಆಯೋಜಿಸುತ್ತಿದ್ದು, ಸಮಾವೇಶದಲ್ಲಿ ‌ಲಕ್ಷಾಂತರ ಜನರನ್ನು ಸೇರಿಸುತ್ತೇನೆ. ಸಮಾವೇಶದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು.

ಇನ್ನು ಚುನಾವಣೆಯ ಕುರಿತು ಮಾತನಾಡಿದ ಅವರು, ಚುನಾವಣೆ ಎಂಬುದು ಒಂದು ರೀತಿಯಲ್ಲಿ ಪರೀಕ್ಷೆಯಿದ್ದಂತೆ. ಈ ಚುನಾವಣಾ ಪರೀಕ್ಷೆಯಲ್ಲಿ ಪಾಸ್ ಫೇಲ್ ಇವೆರೆಡೇ ಆಯ್ಕೆ ಇರುವುದು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾಯಕತ್ವಕ್ಕೆ ಸೋಲಾಯಿತೆಂಬುದಲ್ಲ‌. ನಾಯಕತ್ವ ಎಂದಿಗೂ ಸೋಲುವುದಿಲ್ಲ ಎಂದಿದ್ದಾರೆ.

See also  ಒಮಿಕ್ರಾನ್‌ ಆತಂಕ, ಎಲ್ಲದಕ್ಕೂ ಲಾಕ್‌ಡೌನ್‌ ಮಾತ್ರ ಕಠಿಣ ಕ್ರಮವಲ್ಲ : ಪ್ರಹ್ಲಾದ್‌ ಜೋಶಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು