News Kannada
Sunday, November 27 2022

ಬೆಂಗಳೂರು ನಗರ

ಕೊರೋನ ಅಪ್ಡೇಟ್; ರಾಜ್ಯದಲ್ಲಿ ಇಂದು 2,523 ಪಾಸಿಟಿವ್ ಪ್ರಕರಣಗಳು ವರದಿ - 1 min read

Photo Credit :

ಕೊರೋನ ಅಪ್ಡೇಟ್; ರಾಜ್ಯದಲ್ಲಿ ಇಂದು 2,523 ಪಾಸಿಟಿವ್ ಪ್ರಕರಣಗಳು ವರದಿ

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಲೇ ಇರುವ ಕೊರೋನ ಎರಡನೇ ಅಲೆಯ ಅಬ್ಬರ. ಇಂದು ( ಮಾ .25 ) 2,523 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ . ಇದರೊಂದಿಗೆ ಸೋಂಕಿತರ ಸಂಖ್ಯೆ 9,78,478 ಕ್ಕೆ ಏರಿಕೆಯಾಗಿದೆ .

ಕಳೆದ ಕೇವಲ 24 ಗಂಟೆಗಳಲ್ಲಿ 10 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 12,471 ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಇಂದು 1,623 ಮಂದಿಗೆ ಸೋಂಕು ದೃಢಪಟ್ಟಿದ್ದು , ಇದರೊಂದಿಗೆ ಸೋಂಕಿತರ ಸಂಖ್ಯೆ 4,22,859 ಕ್ಕೆ ಏರಿಕೆಯಾಗಿದೆ . ಇನ್ನು ನಗರದಲ್ಲಿ ಸೋಂಕಿಗೆ ಆರು ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ .

ರಾಜ್ಯದಲ್ಲಿ ಇಂದು 1,192 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ . ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9,47,781 ಕ್ಕೆ ಏರಿಕೆಯಾಗಿದೆ . ಒಟ್ಟು 18,207 ಸಕ್ರಿಯ ಪ್ರಕರಣಗಳಿದ್ದು , ಈ ಪೈಕಿ 150 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

See also  ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಡಿಕೆ ಶಿವಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು