News Kannada
Friday, December 02 2022

ಬೆಂಗಳೂರು ನಗರ

ಮಗನ ಫೊಟೊದೊಂದಿಗೆ ಸಿನಿಮಾ ವೀಕ್ಷಣೆ: ಮನಸ್ಸು ಭಾರವಾಯಿತು ಎಂದು ಭಾವುಕರಾದ ಪುನೀತ್‌

Photo Credit :

ಮಗನ ಫೊಟೊದೊಂದಿಗೆ ಸಿನಿಮಾ ವೀಕ್ಷಣೆ: ಮನಸ್ಸು ಭಾರವಾಯಿತು ಎಂದು ಭಾವುಕರಾದ ಪುನೀತ್‌

ಬೆಂಗಳೂರು: ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಚಿತ್ರವು ಲಕ್ಷಾಂತರ ಕುಟುಂಬಗಳನ್ನು ಚಿತ್ರಮಂದಿರದೆಡೆಗೆ ಸೆಳೆದಿದೆ. ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಇದೇ ಸಂದರ್ಭದಲ್ಲಿ ಪುನೀತ್‌ ಅಭಿಮಾನಿಯಾದ ತಮ್ಮ ಮೃತಪಟ್ಟ ಮಗನ ಫೊಟೊದ ಜೊತೆಗೆ ಪಾಲಕರು ಈ ಚಿತ್ರವನ್ನು ಮೈಸೂರಿನಲ್ಲಿ ನೋಡಿದ್ದಾರೆ. ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ, ಮೃತಪಟ್ಟ ಮಗನಿಗೂ ಒಂದು ಟಿಕೆಟ್‌ ಖರೀದಿಸಿ, ಆ ಆಸನದಲ್ಲಿ ಮಗನ ಭಾವಷಿತ್ರವನ್ನು ಇಟ್ಟು ಚಿತ್ರವನ್ನು ಪಾಲಕರು ಕುಟುಂಬ ಸಮೇತವಾಗಿ ಆನಂದಿಸಿದ್ದಾರೆ. ಮೈಸೂರಿನ ನಿವಾಸಿ‌ ಮುರಳಿಧರ್ ಎಂಬುವವರ ಪುತ್ರ ಹರಿಕೃಷ್ಣನ್ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಮಗ ಪುನೀತ್ ಅಭಿಮಾನಿಯಾಗಿದ್ದು, ಯುವರತ್ನ ನೋಡಬೇಕೆಂದು ಆಸೆಪಟ್ಟಿದ್ದ. ಮಗನ ಆಸೆಯನ್ನು ತೀರಿಸುವ ಸಲುವಾಗಿ ಫೊಟೋ ಇಟ್ಟುಕೊಂಡು ಪೋಷಕರು ಸಿನಿಮಾ ವೀಕ್ಷಿಸಿದ್ದಾರೆ. ಈ ಘಟನೆಯಿಂದ ಭಾವುಕರಾಗಿರುವ ಪುನೀತ್‌ ರಾಜ್‌ಕುಮಾರ್‌, ‘ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸಿದ್ದಾರೆ.

ಹರಿಕೃಷ್ಣನ್‌, ಪುನೀತ್‌ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಯುವರತ್ನ ಚಿತ್ರವನ್ನು ನೋಡಬೇಕು ಎಂಬ ಆಸೆ ಹೊಂದಿದ್ದರು. ಆದರೆ ಚಿತ್ರ ಬಿಡುಗಡೆಗೂ ಮುನ್ನ ಅವರು ಸಾವನ್ನಪ್ಪಿದ್ದರು. ಹೀಗಿದ್ದರೂ, ಮಗನ ಆಸೆಯನ್ನು ಪಾಲಕರು ಈಡೇರಿಸಿದ್ದಾರೆ. ಸಂತೋಷ್‌ ಆನಂದರಾಮ್‌ ನಿರ್ದೇಶನದ ರಾಜಕುಮಾರ ಚಿತ್ರವು ಕೌಟುಂಬಿಕ ಸಿನಿಮಾ ವೀಕ್ಷಿಸುವ ಪ್ರೇಕ್ಷಕ ವರ್ಗವನ್ನು ಸೆಳೆದಿತ್ತು. ಇದೇ ಕಾಂಬಿನೇಷನ್‌ನಲ್ಲಿ ಯುವರತ್ನ ಇದೀಗ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ.
ಚಿತ್ರ ಯಶಸ್ಸು ಕಂಡಿರುವ ಬೆನ್ನಲ್ಲೇ ಪುನೀತ್‌ ರಾಜ್‌ಕುಮಾರ್‌, ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರು ನಟ ಜಗ್ಗೇಶ್‌ ಅವರ ಜೊತೆಗೆ ಸೋಮವಾರ ಬೆಳಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

See also  ಗ್ಯಾಸ್ ಸೋರಿಕೆಯಾಗಿ ಬೆಂಕಿ: ಮಹಿಳೆ ಸಾವು, ಮೂವರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು