News Kannada
Thursday, December 01 2022

ಬೆಂಗಳೂರು ನಗರ

ರಾಜ್ಯ ಕಂಡ ಅತ್ಯುತ್ತಮ ಮುಖ್ಯಕಾರ್ಯದರ್ಶಿ ಗಳಲ್ಲಿ ಒಬ್ಬರಾದ ಜೆಸಿ ಲಿನ್ ನಿಧನ

Photo Credit :

ರಾಜ್ಯ ಕಂಡ   ಅತ್ಯುತ್ತಮ ಮುಖ್ಯಕಾರ್ಯದರ್ಶಿ ಗಳಲ್ಲಿ  ಒಬ್ಬರಾದ ಜೆಸಿ ಲಿನ್ ನಿಧನ

ಬೆಂಗಳೂರು ; ನಮ್ಮ ರಾಜ್ಯದಲ್ಲಿ ನೂರಾರು ಜನಪರ ಅಧಿಕಾರಿಗಳು ಆಡಳಿತ ನಡೆಸಿ ಸಾಕಷ್ಟು ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ. ಈಗಿನ ಜನತೆಗೆ ಅವರ ನೆನಪೂ ಇರುವುದಿಲ್ಲ. ಓರ್ವ ದಕ್ಷ ಅಧಿಕಾರಿಯ ಕುರಿತು ರಾಜ್ಯ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ತಮ್ಮ ಫೇಸ್‌ ಬುಕ್‌ ವಾಲ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ದಿವಂಗತ ದೇವರಾಜ ಅರಸು ಅವರಿಗೆ ಕಾರ್ಯದರ್ಶಿಗಳಾಗಿದ್ದ ಶ್ರೀ ಜೆಸಿ ಲಿನ್ ನಿನ್ನೆ ತೀರಿಕೊಂಡರು. ನಮ್ಮ ರಾಜ್ಯ ಕಂಡ ಕೆಲವೇ ಅತ್ಯುತ್ತಮ ಮುಖ್ಯಕಾರ್ಯದರ್ಶಿ ಗಳಲ್ಲಿ ಜೆಸಿ ಲಿನ್ ಒಬ್ಬರು. ತಾವು ಸರ್ಕಾರದ ಸೇವೆಗೆ ಏಕೆ ಬಂದಿದ್ದೇವೆ ಎಂಬ ಸ್ಪಷ್ಟ ಕಲ್ಪನೆ ಅವರಿಗಿತ್ತು. ಯುವ ಅಧಿಕಾರಿಗಳಿಗೆ ಅತ್ಯುತ್ತಮ ಮೇಲ್ಪಂಕ್ತಿಯಾಗಿ ಇವರು ಕಾರ್ಯ ಮಾಡಿದ್ದರು.ತನ್ನ ದಕ್ಷತೆ, ಜನಪರ ಮನಸ್ಥಿತಿ ಹಾಗೂ ಕಾರ್ಯಕ್ಷಮತೆಗೆ ಹೆಸರಾಗಿದ್ದರು ಶ್ರೀ ಜೆಸಿ ಲಿನ್. ಅವರ ಕಾರ್ಯದಕ್ಷತೆ ಹಾಗೂ ನೇರ ನುಡಿಗೆ ಒಂದು ಉದಾಹರಣೆ ಎಂದರೆ ದಿವಂಗತ ಅರಸುರವರು ಮುಖ್ಯಮಂತ್ರಿಗಳಾಗಿದ್ದಾಗ ಯಾವುದೋ ಒಂದು ಸಂಸ್ಥೆಗೆ ₹ 5000 ಅನುದಾನ ನೀಡಲು ಆದೇಶಿಸಿದರು. (ಆ ಕಾಲದಲ್ಲಿ ₹ 5000 ಬಹಳ ದೊಡ್ಡ ಮೊತ್ತ) ಆ ಕಡತ ಲಿನ್ ಅವರ ಬಳಿಗೆ ಬಂದಾಗ, ಅವರು ಅದನ್ನು ತಿರಸ್ಕರಿಸಿದರು.
ಆಗ ಆ ಸಂಸ್ಥೆಯವರು ಅರಸು ರವರನ್ನು ಭೇಟಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ಮುಖ್ಯಮಂತ್ರಿಗಳಿಗಿಂತ ಈ IAS ಅಧಿಕಾರಿ ದೊಡ್ಡವನೇ? ನಿಮ್ಮ ಆದೇಶವನ್ನು ಉಲ್ಲಂಘಿಸುವ ಉದ್ಧಟತನ ಈ ಅಧಿಕಾರಿ ಯದು. ಇವನ ಮೇಲೆ ನೀವು ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಸಿಟ್ಟನ್ನು ತೋರಿಸಿದರು. ಆಗ ಅರಸು ರವರು ಆ ಕಡತವನ್ನು ತರಿಸಿಕೊಂಡು ನೋಡಿದಾಗ “ಈ ಸಂಸ್ಥೆ ನೊಂದಾಯಿತ ಸಂಸ್ಥೆ ( Registered) ಅಲ್ಲದ ಕಾರಣ ಅನುದಾನ ಕೊಡಲು ಬರುವುದಿಲ್ಲ” ಎಂದು ಲಿನ್ ರವರು ಸ್ಪಷ್ಟವಾಗಿ ಬರೆದಿರುವುದು ಕಂಡಿತು. ಆಗ ಅರಸು ಅವರು ಸಂಸ್ಥೆಯ ಪದಾಧಿಕಾರಿಗಳಿಗೆ ಸಮಾಧಾನ ಮಾಡಿ ತಮ್ಮ ಅಧಿಕಾರಿ ಬರೆದಿರುವುದು ಸಮಂಜಸವೆಂದು ಆ ಸಂಸ್ಥೆಗೆ ಬೇರೆ ರೀತಿ ಸಹಾಯ ಮಾಡುವುದಕ್ಕೆ ಕ್ರಮ ಕೈಗೊಂಡರು.
ನಮ್ಮ ರಾಜ್ಯ ಇಂತಹ ಅನೇಕ ಅಧಿಕಾರಿಗಳನ್ನು ಪಡೆದಿದ್ದ ಉದಾಹರಣೆ ಗಳಿವೆ. ಹೆಮ್ಮೆಯೂ ಇದೆ. ಇಂತಹ ದಕ್ಷ, ವೃತ್ತಿಪರ ಅಧಿಕಾರಿಯಾಗಿದ್ದ ಜೆಸಿ ಲಿನ್ ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದಿರುವ ಸುರೇಶ್‌ ಕುಮಾರ್‌ ಅವರು ಲಿನ್‌ ನಿವೃತ್ತರಾದ ನಂತರ ಲಿನ್ ಅವರು ರೆಸಿಡೆನ್ಸಿ ರಸ್ತೆಯಲ್ಲಿ ಅನೇಕ ಬಾರಿ ಎರಡು ಕೈಯಲ್ಲೂ ತರಕಾರಿ ಹಣ್ಣು-ಹಂಪಲು ತುಂಬಿರುವ ಚೀಲಗಳನ್ನು ಹಿಡಿದು ನಡೆದು ಹೋಗುತ್ತಿದ್ದದ್ದನ್ನು ನನ್ನ ಗೆಳೆಯರು ಅನೇಕ ಬಾರಿ ನೀಡಿದ್ದಾರೆ. ಅವರಿಗೆ ನಮಸ್ಕಾರ ಮಾಡಿದಾಗ “ಎರಡೂ ಕೈಯಲ್ಲಿ ತುಂಬಾ ಭಾರವಿದೆ, ಹೇಗೆ ನಮಸ್ಕಾರ ಮಾಡಲಿ” ಎಂದು ಹೇಳುತ್ತಾ ತಲೆಯಾಡಿಸಿ ನಗುತ್ತಾ ಪ್ರತಿ ನಮಸ್ಕಾರ ಮಾಡುತ್ತಿದ್ದರಂತೆ ಲಿನ್ ಎಂದೂ ಬರೆದಿದ್ದಾರೆ. .

See also  ರಾಜ್ಯದ 130 ತಾಲೂಕುಗಳು ಪ್ರವಾಹ ಪೀಡಿತವೆಂದು ಸರ್ಕಾರದ ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು