News Kannada
Monday, September 26 2022

ಬೆಂಗಳೂರು ನಗರ

ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​​ಗೆ ಜಯಭೇರಿ - 1 min read

Photo Credit :

ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​​ಗೆ ಜಯಭೇರಿ

ರಾಮನಗರ : ರಾಮನಗರ ನಗರಸಭೆ​​ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್​​ಗೆ ಭಾರೀ ಮುಖಭಂಗವಾಗಿದೆ. ವಿಪರ್ಯಾಸವೆಂದರೆ ಗೆಲುವಿನ ಸಂಭ್ರಮಾಚರಣೆ ಮಾಡಲು ಕಾಂಗ್ರೆಸ್​ ಅಭ್ಯರ್ಥಿಯೇ ಇಲ್ಲ. ಹೌದು, ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಕೊರೋನಾಗೆ ಬಲಿಯಾಗಿದ್ದರು. ಇಂದು ಮತ ಎಣಿಕೆ ನಡೆದು ಲೀಲಾ ಗೋವಿಂದರಾಜು ಗೆಲುವು ಸಾಧಿಸಿದ್ದಾರೆ.
917 ಮತಗಳನ್ನ ಪಡೆದು 810 ಮತಗಳ ಅಂತರದಿಂದ ಕೈ ಅಭ್ಯರ್ಥಿ ಲೀಲಾ ಗೋಂವಿದರಾಜು ಗೆಲುವು ಪಡೆದಿದ್ದಾರೆ. ಇವರ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಕೇವಲ 107 ಮತಗಳನ್ನಷ್ಟೆ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ಡಿಸಿಎಂ ಅಶ್ವಥ್ ನಾರಾಯಣ್​​ಗೆ ಮುಖಭಂಗ ಆಗಿದ್ದು, ರಾಮನಗರ ನಗರಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ.
ರಾಮನಗರ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿಲ್ಲ. 31 ವಾರ್ಡ್ ಗಳ ಪೈಕಿ ಒಂದೂ ವಾರ್ಡ್ ನಲ್ಲೂ ಬಿಜೆಪಿ ಖಾತೆ ತೆರೆದಿಲ್ಲ. 31 ವಾರ್ಡ್ ಗಳಲ್ಲೂ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಸ್ವತಃ ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಅಶ್ವಥ್ ನಾರಾಯಣ್ ಅಬ್ಬರದ ಪ್ರಚಾರ ನಡೆಸಿದ್ದರು. 20 ವಾರ್ಡ್ ಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಅಂತಾ ಅಶ್ವಥ್ ನಾರಾಯಣ್ ಹೇಳಿದ್ದರು. ಒಟ್ಟಾರೆ 31 ವಾರ್ಡ್ ಗಳ ಪೈಕಿ ಕಾಂಗ್ರೆಸ್-19, ಜೆಡಿಎಸ್-11, ಪಕ್ಷೇತರ -01 ವಾರ್ಡ್​​ನಲ್ಲಿ ಗೆಲುವು ಸಾಧಿಸಿವೆ.

See also  ಪ್ರಧಾನಿ ಮೋದಿ ಮುಸ್ಲಿಂ ದೇಶಗಳ ಜತೆ ವ್ಯಾಪಾರ ನಿಲ್ಲಿಸಲಿ; ಪ್ರಿಯಾಂಕ್ ಖರ್ಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು