News Kannada
Monday, September 26 2022

ಬೆಂಗಳೂರು ನಗರ

ಬಿಬಿಎಂಪಿ ದಕ್ಷಿಣ ವಲಯ ವಾರ್‌ ರೂಂ 17 ಸಿಬ್ಬಂದಿ ವಜಾ - 1 min read

Photo Credit :

ಬಿಬಿಎಂಪಿ ದಕ್ಷಿಣ ವಲಯ ವಾರ್‌ ರೂಂ 17 ಸಿಬ್ಬಂದಿ ವಜಾ

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ ಮಾಡುವುದರ ಹಿಂದೆ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಬಳಿಕ ಬಿಬಿಎಂಪಿಯು, ದಕ್ಷಿಣ ವಲಯದ ವಾರ್‌ ರೂಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 17 ಸಿಬ್ಬಂದಿಯನ್ನು ವಜಾ ಮಾಡಿದೆ.‘ವಾರ್‌ ರೂಂನಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದ 17 ಸಿಬ್ಬಂದಿ ಬಗ್ಗೆ ಸಂಸದರು ಹಾಗೂ ಶಾಸಕರು ಆರೋಪ ಮಾಡಿದ್ದಾರೆ. ಅವರನ್ನೆಲ್ಲ ಕೆಲಸದಿಂದ ತೆಗೆದಿದ್ದೇವೆ’ ಎಂದು ದಕ್ಷಿಣ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ ತಿಳಿಸಿದರು.
‘ಸಂಸದರು ಮತ್ತು ಶಾಸಕರು ಮಾಡಿರುವ ಆರೋಪಗಳು ಕೇವಲ ದಕ್ಷಿಣ ವಲಯಕ್ಕೆ ಸಂಬಂಧಿಸಿದ್ದಲ್ಲ. ಅವರು ಕೊಟ್ಟಿರುವ ದಾಖಲೆಗಳಲ್ಲಿ ದಕ್ಷಿಣ ವಲಯಕ್ಕೆ ಸಂಬಂಧಿಸಿದ್ದು ಎರಡು ಮೂರು ಮಾತ್ರ. ಆರೋಪದ ಆ ಬಗ್ಗೆ ದಾಖಲೆ ಒದಗಿಸಿದರೆ ಮುಖ್ಯ ಆಯುಕ್ತರು ತನಿಖೆ ನಡೆಸಲಿದ್ದಾರೆ. ಆರೋಪಗಳು ತನಿಖೆಯಲ್ಲಿ ಸಾಬೀತಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.‘ಹಾಸಿಗೆ ಕಾಯ್ದಿರಿಸುವ ಕುರಿತು ತನಿಖೆ ನಡೆಸುವ ಹೊಣೆಯನ್ನು ಸರ್ಕಾರ ಪೊಲೀಸರಿಗೆ ವಹಿಸಿದೆ. ಅವರೇ ತನಿಖೆ ನಡೆಸಲಿದ್ದಾರೆ. ಹಾಸಿಗೆ ಕಾಯ್ದಿರಿಸಿದ್ದು ಯಾರು, ಆ ಸಂದರ್ಭದಲ್ಲಿ ತಂತ್ರಾಂಶದ ಲಾಗಿನ್‌ ಐಡಿ ಯಾರ ನಿಯಂತ್ರಣದಲ್ಲಿತ್ತು, ಲಾಗಿನ್‌ ಆಗಿದ್ದವರು ಯಾರು, ರೋಗಿಗಳ ಕಡೆಯವರು ಯಾರಿಗೆ ದುಟ್ಟು ಕೊಟ್ಟಿದ್ದಾರೆ, ತೆಗೊಂಡಿದ್ದು ಯಾರು ಎಂಬ ಆಯಾಮದಲ್ಲೂ ತನಿಖೆ ಆಗಬೇಕಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ತಿಳಿಸಿದರು.

See also  ಮೊದಲ ಹಂತದ ಚುನಾವಣೆಗೆ ಮೊದಲು ಕಾಂಗ್ರೆಸ್ ಗೆ ದೊಡ್ಡ ಆಘಾತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು